ಗುಂಡ್ಲುಪೇಟೆ : ತಾಲ್ಲೂಕಿನ ಬೇಗೂರು ಸಮೀಪದ ಕುರುಬರಹುಂಡಿ ಗ್ರಾಮದಲ್ಲಿ ಚಿರತೆಯೊಂದು ಕರುವಿನ ಮೇಲೆ ದಾಳಿ ನಡೆಸಿರುವ ಘಟನೆ ಓಂಕಾರ್ ಅರಣ್ಯ ವಲಯದಲ್ಲಿ ನಡೆದಿದೆ
ಗ್ರಾಮದ ಚನ್ನವೀರಪ್ಪ ಎಂಬುವರಿಗೆ ಸೇರಿದ ಕುರುವೂಂದು ಚಿರತೆದಾಳಿಗೆ ತುತ್ತಾಗಿದ್ದು ಗ್ರಾಮದ ಸಮೀಪದಲ್ಲೇ ಇರುವ ಜಮೀನಿನಲ್ಲಿ ರೈತ ಚನ್ನವೀರಪ್ಪ ಎಂಬುವರು ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುವಾಗ ಮಧ್ಯಾಹ್ನದ ವೇಳೆಯಲ್ಲಿ ಚಿರತೆ ದಾಳಿ ನಡೆಸಿದ್ದು, ಇದನ್ನು ಕಂಡ ರೈತ ಅಕ್ಕಪಕ್ಕದವರನ್ನು ಕೂಗಿದಾಗ ಚಿರತೆ ಗಾಬರಿಯಿಂದ ಪಕ್ಕದಲ್ಲೆ ಇರುವ ಬಾಳೆ ತೋಟಕ್ಕೆ ನುಗ್ಗಿದ್ದು ಗ್ರಾಮದ ಬಿಜೆಪಿ ಮುಖಂಡ ಪ್ರದೀಪ್ ಮಣೆಗಾರ್ ಹಾಗೂ ರೈತರು ಗ್ರಾಮಸ್ಥರು ಚಿರತೆ ಸೆರೆಹಿಡಿಯಲು ಬೋನು ಇರಿಸುವಂತೆ ಆಗ್ರಹಿಸಿದ್ದಾರೆ.





