ಚಾಮರಾಜನಗರ: ಸ್ವಾಂತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಅವರಿಗೆ ಟಿಪ್ಪು ಸುಲ್ತಾನ್ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ವಸತಿ ಹಾಗೂ ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ನಡೆದ ಡಿ.ದೇವರಾಜ್ ಅರಸು 107 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾವರ್ಕರ್ ಅಪ್ರತಿಮ ಹೋರಾಟಗಾರ ಬ್ರಿಟೀಷರು ನೀಡಿದ ಸಂಕಷ್ಟಗಳನ್ನು ಸಹಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಟಿಪ್ಪು ಸುಲ್ತಾನ್ ಯಾವ ಜೈಲಿನಲ್ಲಿದ್ದ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರನ್ನು ನಾವು ಪ್ರಬುದ್ಧ ರಾಜಕಾರಣಿ ಎಂದುಕೊಂಡಿದ್ದೇವೆ ಧರ್ಮದ ವಿಚಾರಗಳನ್ನು ತಂದು ಈಗೇ ವಿವಾದ ಸೃಷ್ಟಿಸಬಾರದು ಎಂದು ತಿಳಿಸಿದರು.