Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಪ್ರೀತಿಸಿ :ಪೃಥ್ವಿರಾಜ್‌ ಹಾಲಹಳ್ಳಿ

ಮೈಸೂರು: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಿಯುಸಿ ಹಂತ ಪ್ರಮುಖ ಘಟ್ಟ,ಮನಸ್ಸು ಮರ್ಕಟದ ರೀತಿಯಲ್ಲಿ ವರ್ತಿಸುತ್ತದೆ, ಅದನ್ನ ಬುದ್ದಿಯಿಂದ ಕಟ್ಟಿ ಹಾಕಿ,ಉನ್ನತ ಮಟ್ಟದಲ್ಲಿ ಬೆಳವಣಿಗೆ ಹೊಂದಲು ಇಂತಹ ಕಾರ್ಯಕ್ರಮ ಸಹಾಯ ಮಾಡುತ್ತವೆ,ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಪ್ರೀತಿಸಿ ಎಂದು ಪೃಥ್ವಿರಾಜ್‌ ಹಾಲಹಳ್ಳಿ  ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಅತ್ಯುತ್ತಮ ಸ್ನೇಹಿತ ಅಂದರೆ ಪುಸ್ತಕ ಮಾತ್ರ,ತಾತ್ಕಾಲಿಕ ಜನಪ್ರಿಯತೆ ಇಂದ ಹೊರಬನ್ನಿ,self I reels ಗಳಂತಹ ವಿಚಾರದಿಂದ ಹೊರಬನ್ನಿ,ಸ್ಪರ್ದಾತ್ಮಕ ಜಗತ್ತಿನಲ್ಲಿದ್ದೀರಿ,smart work ಮಾಡಿ,ದುಶ್ಚಟಗಳಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಡಿ ಕೆ ಶ್ರೀನಿವಾಸಮೂರ್ತಿಅವರು ಮಾತನಾಡಿ ಮಕ್ಕಳು ಪ್ರಗತಿ ಕಾಣಬೇಕಾದರೆ ಇಂತಹ ಕಾರ್ಯಕ್ರಮಗಳು ಸಹಾಯಕ,ಸಂಸ್ಥೆಯ ಅನೇಕ ಮೌಲ್ವಿಕ ಕಾರ್ಯಕ್ರಮ ಗಳು ಸಮಾಜಕ್ಕೆ ಪೂರಕವಾಗಿ ಇರುತ್ತವೆ,ಮುಂಬರುವ ಪರೀಕ್ಷೆ ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು,ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಕೃತಿ ಚಿಂತಕರಾದ ಪೃಥ್ವಿರಾಜ್‌ ಹಾಲಹಳ್ಳಿ ಮಾತನಾಡಿ ವ್ಯಕ್ತಿ ದೊಡ್ಡವನಾಗುವುದು ವ್ಯಕ್ತಿತ್ವದಿಂದ,ಶಿಕ್ಷಣ ಮಾತ್ರ ಅದನ್ನು ನಿರ್ಮಾಣ ಮಾಡುತ್ತದೆ,ಸಂಸ್ಕಾರವಂತ ಶಿಕ್ಷಣದ ಮೂಲಕ ನಾಡು ಕಟ್ಟಬಹುದು ಎಂದರು,

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಾಂತಮಲ್ಲಪ್ಪ ವಹಿಸಿದ್ದರು,ಗಣಿತ ಉಪನ್ಯಾಸಕರಾದ ಹರೀಶ್ ರವರು,ಮತ್ತು ಇನ್ನಿತರರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು,

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ