ಮಂಡ್ಯ: ಶೋಭಕೃತ್ ನಾಮ ಸಂವತ್ಸವರದ ವಿಶ್ವ ವಿಖ್ಯಾತ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚಲುವನಾಯಣಸ್ವಾಮಿಯ ವಜ್ರಖಚಿತ ವೈರಮುಡಿ ಉತ್ಸವ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಬೆಳಗಿನ ಜಾವ 3 ಗಂಟೆವರೆಗು ನಡೆಯಿತು. ದೇವಾಲಯದ ಸುತ್ತಲೂ ಕಿಕ್ಕಿರಿದು ತುಂಬಿದ್ದ ಭಕ್ತವೃಂದ ಚೆಲುವನಾರಾಯಣನ ವೈರಮುಡಿ ಉತ್ಸವ ಕಂಡೊಡನೆ ಗೋವಿಂದ ನಾಮ ಸ್ಮರಣೆಯ ಘೋಷಣೆ ಮೊಳಗಿಸುತ್ತಾ ವೈರಮುಡಿ ಉತ್ಸವದ ಚೆಲುವನ ದರ್ಶನ ಪಡೆದು ಪುನೀತರಾದರು. ಮಂಡ್ಯ ನಗರದ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವೈರಮುಡಿಗೆ ಮೊದಲ ಪೂಜೆ ಸಲ್ಲಿಸಲಾಯಿತು. ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಮಾರ್ಗವಾಗಿ ವೈರಮುಡಿ ಮೇಲುಕೋಟೆ ತಲುಪಿತು. ವೈರಮುಡಿ ಸಾಗುವ ಮಾರ್ಗದ ಪ್ರತಿ ಗ್ರಾಮದಲ್ಲೂ ವೈರಮುಡಿಗೆ ಗ್ರಾಮಸ್ಥರಿಂದ ಪೂಜೆ ಸಲ್ಲಲಿದೆ.
ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಅದ್ಧೂರಿಯಾಗಿ ಜರುಗಿದ ಚೆಲುವನಾರಾಯಣನ ವೈರಮುಡಿ ಉತ್ಸವ



