ಮಳವಳ್ಳಿ: ಪಟ್ಟಣದಲ್ಲಿ ಟ್ಯೂಷನ್ ಗೆ ತೆರಳಿದ್ದ 10 ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಆರೋಪಿ ವಿರುದ್ದ ಮಳವಳ್ಳಿ ಪೊಲೀಸರು ನ್ಯಾಯಲಯಕ್ಕೆ ಮಂಗಳವಾರ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಈ ಪ್ರಕರಣವು ಘೋರ ಹಾಗೂ ಸೂಕ್ಷವಾಗಿರುವುದರಿಂದ ಜಿಲ್ಲಾ ವರಿಷ್ಠಾಧಿಕಾರಿ ರವರು ಡಿವೈಎಸ್ ಪಿ ತನಿಖೆ ನಡೆಸಲು ಸೂಚಿಸಿದರು
ಅಂತಯೇ ವೈಜ್ಞಾನಿಕವಾಗಿ ಹಾಗೂ ತ್ವರಿತ ವಾಗಿ ತನಿಖೆ ಪೂರೈಸಿ ಕೇವಲ 14 ದಿನಗಳಲ್ಲಿ ನ್ಯಾಯಾಲಯ ಕ್ಕೆ ದೋಷಾರೋಪಣ ಸಲ್ಲಿಸಿದ್ದಾರೆ
ಈ ಪ್ರಕರಣ ಕುರಿತು ಮಳವಳ್ಳಿ ಟೌನ್ ಪೊಲೀಸಠಾಣೆ ಯಲ್ಲಿ ಸೆಕ್ಷನ್ 302, 201, 376(ಎ) 370(ಎಬಿ) ಐಪಿಸಿ ಮತ್ತು ಸೆಕ್ಷನ್ 5(ಬಿ) 5(ಎಂ) 6 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಸೂಕ್ಷತೆ ಹಿನ್ನಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಐಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದರು.
ಈ ಪ್ರಕರಣ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಗೊಂಡು ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಚಾಜ್೯ಶೀಟ್ ಸಲ್ಲಿಸಿದ್ದಾರೆ





