Ashburn
69
overcast clouds
Light
Dark

ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪೊಲೀಸರ ವಶ

ಹನೂರು : ವಿವಿಧೆಡೆ ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನೂರು ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿ ನಡೆದಿದೆ.

ಮೈಸೂರು ಅಜೀಜ್‍ಸೇಠ್ ನಗರದ ಅಖ್ತಾರ್‍ಖಾನ್ (23) ಆಲಿಯಾಸ್ ಅಖ್ತಾರ್ ಹಾಗೂ ಕೆಸರೆಯ ದಸ್ತಗೀರ್ ಆಹಮದ್ ಖಾನ್ ಆಲಿಯಾಸ್ ಅರ್ಮಾನ್ ಎಂಬುವವರೇ ಬಂಧಿತ ಆರೋಪಿಗಳು.

ಇವರು ವಿವಿಧೆಡೆ ಬೈಕ್‍ಗಳನ್ನು ಕಳ್ಳತನ ಮಾಡಿ ಇತರರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಅವರ ನೇತೃತ್ವದಲ್ಲಿ ಸಬ್ ಇನ್ಸ್‍ಪೆಕ್ಟರ್ ರಾಜೇಂದ್ರ ಪ್ರಸಾದ್, ಎಎಸ್‍ಐ ಕೃಷ್ಣ, ಮುಖ್ಯ ಪೇದೆಗಳಾದ ಮಹದೇವಸ್ವಾಮಿ, ಚಂದ್ರು, ಪೇದೆಗಳಾದ ರಾಮಕೃಷ್ಣ, ಶಿವಕುಮಾರ್ ತಂಡ ಆ.4 ರಂದು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಬಂಧಿತರು 4 ಬೈಕ್‍ಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, 2 ಬೈಕ್‍ಗಳನ್ನು ಕೊಳ್ಳೇಗಾಲದಲ್ಲಿ ಹಾಗೂ ಒಂದು ಬೈಕ್ ಅನ್ನು ಹನೂರಿನ ಆರ್.ಎಸ್ ದೊಡ್ಡಿಯಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿತು. ಮಾರಾಟ ಮಾಡಿರುವ ಬೈಕ್‍ಗಳನ್ನು ವಶಪಡಿಸಿಕೊಂಡ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ