ಚಾಮರಾಜನಗರ : ತಾಲ್ಲೂಕಿನ ಮುರುಟಿ ಪಾಳ್ಯ ಗ್ರಾಮದ ಸಾಯಿ ಫಾರಂನಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಆತಂಕವನ್ನುಂಟು ಮಾಡಿತ್ತು ಬಳಿಕ ಶ್ರೀನಿವಾಸ್ ಬಾಬು ಅವರು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸಾಯಿ ಫಾರಂನಲ್ಲಿ ಅಡಗಿದ್ದ ಹೆಬ್ಬಾವನ್ನು ಸಂರಕ್ಷಣೆ ಮಾಡಿ.
ಬಳಿಕ ಬೆಳಗಿರಿ ರಂಗನ ಬೆಟ್ಟದ ಕಾಡಿಗೆ ಅಧಿಕಾರಿಗಳ ಜೊತೆಯಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.
ಕಳೆದ ಒಂದು ವಾರದ ಹಿಂದೆಯೂ ಕೂಡ ಇದೇ ಗ್ರಾಮದ ವೆಂಕಟರೆಡ್ಡಿ ಎಂಬುವವರ ಜಮೀನಿನಲ್ಲಿ ಹೆಬ್ಬಾವು ಪತ್ತೆಯಾಗಿದ್ದು ಸ್ನೇಕ್ ಮಹೇಶ್ ಅವರು ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. ಇಂದು ಸಹ ಪತ್ತೆಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.