ಚಾಮರಾಜನಗರ : ನೆನ್ನೆ ದಿನ ಸುರಿದ ಮಳೆಗೆ ಜಿಲ್ಲೆಯು ತತ್ತರವಾಗಿದೆ ಮಳೆಯ ಪರಿಣಾಮ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಜನರು ಪರಿತಪಿಸುವಂತಾಯಿತು. ಚೆನ್ನೀಪುರಮೊಳೆಯ ಸುಮಾರು ೧೦ ಮನೆಗಳು ಜಲಾವೃತಗೊಂಡಿದ್ದು ಮನೆಗಳ ಒಳಗೆ ಮೊಣಕಾಲಿನ ಮಟ್ಟ ನೀರು ನಿಂತಿರುವ ಸಾಕಷ್ಟು ದೃಶ್ಯಗಳು ಕಂಡುಬಂದಿತು.
ಮತ್ತೊಂದೆಡೆ ಭಾರೀ ಮಳೆ ಹಿನ್ನಲೆ ಅಯ್ಯನಪುರದ ನಿವಾಸಿ ರಾಜಶೇಖರ ಎಂಬುವರಿಗೆ ಸೇರಿದ ಮನೆ ಕುಸಿತಗೊಂಡು ವಾಸಿಸಲು ಮನೆ ಇಲ್ಲದೆ ಕುಟುಂಬ ಪರದಾಡುವಂತಾಯಿತು. ಹೀಗಾಗಿ ಸೂಕ್ತ ಪರಿಹಾರ ನೀಡಿ ಮನೆ ಪುನರ್ನಿರ್ಮಾಣ ಮಾಡಿಕೊಡುವಂತೆ ಒತ್ತಾಯ ಮಾಡಿದ್ದಾರೆ. ಮನೆ ಕುಸಿತಗೊಡಿದ್ದರಿಂದ ಸದ್ಯ ಯಾವುದೇ ಪ್ರಾಣಾಪಾಯು ಸಂಭವಿಸಿಲ್ಲ.
ಮೈದುಂಬಿ ಹರಿದ ಸುವರ್ಣಾವತಿ ನದಿ
ಸತತ ಮಳೆಯಿಂದಾಗಿ ಜಿಲ್ಲೆಯ ಸುವರ್ಣಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಚಾ.ನಗರ ಅವಳಿ ಜಲಾಶಯಗಳಿಂದc ಹೊರ ಅರಿವು ಹೆಚ್ಚಾಗಿದ್ದು ನದಿ ಮೈದುಂಬಿ ಹರಿಯುತ್ತಿದೆ, ತಾಲ್ಲೂಕಿನ ಆಲೂರು ಗ್ರಾಮದ ಅಡಿಕೆ, ಬಾಳೆ, ಕಬ್ಬು ಬೆಳೆ ಜಲಾವೃತಗೊಂಡಿದ್ದು ಅಪಾಯದ ಮಟ್ಟ ಮೀರಿ ಸುವರ್ಣಾವತಿ ನದಿ ಹರಿಯುತ್ತಿದೆ.