Light
Dark

ಸಾವಿಗೆ ಶರಣಾದ ಉಪನ್ಯಾಸಕಿ ಚಂದನಾ ಡೆತ್ ನೋಟ್ ನಲ್ಲಿ ಏನಿದೆ?

ಚಾಮರಾಜನಗರ :  ತಮ್ಮ ಜನ್ಮ ದಿನದಂದೇ, ಕಾಲೇಜು ಉಪನ್ಯಾಸಕಿಯೋರ್ವರು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ ಘಟನೆ ನಗರದಲ್ಲಿ ಮಂಗಳವಾರ ನಡೆದಿತ್ತು.
ನಗರದ ಜೆ ಎಸ್ ಎಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಚಂದನಾ (26) ಮೃತಪಟ್ಟಿದ್ದು ಇದೀಗ ಅವರು ಬರೆದಿರುವ ಡೆತ್‌ನೋಟ್‌ ಪತ್ತೆಯಾಗಿದೆ.

ಚಂದನಾ ಡೆತ್ ನೋಟ್ ನಲ್ಲಿ ಏನಿದೆ?

ಚಂದನಾ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಬರೆದಿದೆ. ‘ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆ ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಿದ್ದೀರಾ? ನಾನು ಯಾರ ಪರ ಇರಲಿ, ಯಾರ ಮಾತು ಕೇಳಿಲಿ? ಎಂದು ಗೊತ್ತಾಗುತ್ತಿಲ್ಲ. ನಾನು ಏನು ಅಂದುಕೊಂಡರೂ ಮಾಡಲು ಆಗುತ್ತಿಲ್ಲ, ಮಾಡೋಕ್ಕೆ ಬಿಡುತ್ತಿಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿ ಸಾಕಾಗಿದೆ. ಮುಂದೆ ಏನು ಮಾಡಬೇಕು? ಹೇಗೆ ಇರಬೇಕು? ಎಲ್ಲ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ಮೈಂಡ್ ಫುಲ್ ಬ್ಯಾಂಕ್ ಆಗಿದೆ. ಏನು ಮಾಡೋಕು ಆಗುತ್ತಿಲ್ಲ.

‘ಈ ಕಡೆ ಕಾಲೇಜು, ಆ ಕಡೆ ಮನೆ. ಎರಡೂ ಕಡೆ ಒ ಹೇಗೆ ಇರೋದಿಕ್ಕೆ ಆಗುತ್ತೆ? ಕೆಲಸ ಹೊಸದು. ಮಕ್ಕಳಿ ಅರ್ಥ ಆಗೋ ಹಾಗೆ ಪಾಠ ಮಾಡಬೇಕು, ಓದಬೇಕು ನೋಟ್ಸ್ ಮಾಡಬೇಕು. ನಾನು ಓದೋದು ನಿಧಾನ. ಯುಟ್ಯೂಬ್ ಹೇಗೆ ಮ್ಯಾನೇಜ್ ಮಾಡಬೇಕು ಗೊತ್ತಾಗುತ್ತಿಲ್ಲ. ಅದಕ್ಕೆ ನಾನು ಮನೆಗೂ ಬರ್ತಾ ಇರಲಿಲ್ಲ. ಸಾರಿ ಪಪ್ಪಾ.. ನನಗೆ ಆಗುತ್ತಿಲ್ಲ. ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಿಮ್ಮದೇ ಆದ ದೃಷ್ಟಿಯಲ್ಲಿ ನೋಡ್ತೀರ. ಸಾರಿ ಫ್ರೆಂಡ್ಸ್ ಆಲ್… ನಾನು ಯಾರನ್ನೂ ಪ್ರೀತಿ ಮಾಡ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ’.

‘ಮೇಘ ಅಕ್ಕ ಯಾರಿಗೂ ಹಿಂಸೆ ಕೊಡಬೇಡ. ಅನು ಅಕ್ಕ ಸಾರಿ ಕಣೆ, ನೀನು ನನಗೆ ಎಲ್ಲ ಮಾಡಿದ್ರೂ ಯೂ ಆರ್ ಮೈ ಬೆಸ್ಟ್. ನಿತ್ಯ ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊ. ಈ ಕೆಲಸ ಬೇಡ. ಆರೋಗ್ಯ ಹಾಳಾಗುತ್ತೆ. ಅಜ್ಜಿ, ಅಮ್ಮ ಎಲ್ಲರೂ ಚೆನ್ನಾಗಿರಿ. ರಮ್ಯ ಮೇಡಂ ಸಾರಿ… ಮಿಸ್ ಯು ಆಲ್’ ಎಂದು ಡೆತ್‌ ನೋಟ್‌ನಲ್ಲಿ ಬರೆಯಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ