Mysore
27
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಹುಲಿ ಯೋಜನೆ ಘೋಷಣೆ ಮಾಡುವುದರಿಂದ ನಮ್ಮ ಮೂಲಭೂತ ಸೌಲಭ್ಯ ‍‍& ಹಕ್ಕುಗಳ ಮೇಲೆ ತೊಂದರೆಯಾಗುತ್ತದೆ : ಡಾ.ಮಾದೇಗೌಡ

ಚಾಮರಾಜನಗರ : ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿಂದು ಬುಡಕಟ್ಟು ಸಮುದಾಯದ ಜನರು ಸಮಾವೇಶಗೊಂಡು ಆದಿವಾಸಿಗಳ ದಿನಾಚರಣೆ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಆಚರಿಸಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಿಂದ  ನಡೆದ ಅಂತಾರಾಷ್ಟ್ರೀಯ ಆದಿವಾಸಿ ಬುಡಕಟ್ಟು ಸಮುದಾಯದ ಜನರು ಸಮಾವೇಶಗೊಂಡು ತಮ್ಮ ಆದಿವಾಸಿ ಸಂಪ್ರದಾಯದಂತೆ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

 

ಗಿರಿಜನರ ಅಂತಾರಾಷ್ಟ್ರೀಯ ದಿನಾಚರಣೆ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಡಾ.ಮಾದೇಗೌಡ 28ನೇ ವರ್ಷದ ಆದಿವಾಸಿ ಗಳ ದಿನಾಚರಣೆ ಪ್ರಪಂಚದಾದ್ಯಂತ ಇರುವ ಆದಿವಾಸಿಗಳನ್ನು ಗುರುತಿಸಿ ಅವರ ಹಕ್ಕುಗಳಿಗೆ ಬೆಲೆ ಕೊಡಬೇಕು ಮತ್ತು ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಲಭುತ ಸೌಲಭ್ಯಗಳ ಜೊತೆಗೆ ಅರಣ್ಯದ ಹಕ್ಕುಗಳನ್ನು ಕೊಡಬೇಕು. ಆದಿವಾಸಿಗಳಿಗಾಗಿ ವಿಶ್ವಸಂಸ್ಥೆ ಈ ದಿನವನ್ನು ಘೋಷಣೆ ಮಾಡಿದೆ.ʼಮಹಿಳೆಯರ ಬೆಳವಣಿಗೆ ಮತ್ತು ಅವರ ಸಂಸ್ಕೃತಿಗೆ ಅವರ ಪಾತ್ರ;ʼ ಎಂದು ಈಓ ವರ್ಷದ ಘೋಷ ವಾಖ್ಯವಾಗಿದ್ದು,. ಈ ನಿಟ್ಟಿನಲ್ಲಿ ನಾವು ಇಂದು ಆದಿವಾಸಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು. ನಾವು 56 ಪೋಡೊಗಳಲ್ಲಿ ಸುಮಾರು ಸುಮಾರು 15000 ಜನರು ವಾಸ ಮಾಡುತ್ತಿದ್ದೇವೆ. ಈಗ ಹುಲಿ ಯೋಜನೆಯನ್ನು ಘೋಷಣೆ ಮಾಡುವುದರಿಂದ ನಮಗೆ ಮೂಲಭೂತ ಸೌಲಭ್ಯಗಳು ಮತ್ತು ಹಕ್ಕುಗಳ ಮೇಲೆ ತೊಂದರೆಯಾಗುತ್ತದೆ ಹೀಗಾಗಿ ನಮಗೆ ಹುಲಿ ಯೋಜನೆಯನನು ಘೋಷಣೆ ಮಾಡುವ ಅವಶ್ಯಕತೆ ಇಲ್ಲ ಎಂದರು. ವನ್ಯಜೀವಿಧಾಮವನ್ನೆ ಮುಂದುವರಿಸಬೇಕೆಂಬುದು ನಮ್ಮ ಅಭಿಪ್ರಾಯ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ