ಚಾಮರಾಜನಗರ: ಆದಿವಾಸಿಗಳು ಆಸ್ಪತ್ರೆಗೆ ಬಂದ ವೇಳೆ ಅವರಿಗೆ ಸೂಕ್ತ ಮಾರ್ಗದರ್ಶನ, ವಿಶೇಷ ಕಾಳಜಿ ವಹಿಸಲು ಕೋಶವೊಂದು (ಸೆಲ್) ಸಿಮ್ಸ್ನಲ್ಲಿ ಸ್ಥಾಪನೆಯಾಗುತ್ತಿದೆ. ಈ ರೀತಿಯ ಪ್ರಯತ್ನ ರಾಜ್ಯದಲ್ಲಿ ಇದೇ ಮೊದಲಾಗಿದೆ.
ಸರ್ಕಾರ ಈಗಾಗಲೇ ಈ ಘಟಕ ಸ್ಥಾಪನೆಗೆ 12 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. “ಆರೋಗ್ಯ ಮಿತ್ರ” ಎಂಬ ಬುಡಕಟ್ಟು ಜನಾಂಗದ ವ್ಯಕ್ತಿಯೋರ್ವ ಘಟಕದಲ್ಲಿದ್ದು, ಆದಿವಾಸಿಗಳು ಆಸ್ಪತ್ರೆಗೆ ಬಂದ ವೇಳೆ ಅವರಿಗೆ ಮಾರ್ಗದರ್ಶನ, ಆರೈಕೆ, ಸಂಬಂಧಪಟ್ಟ ವೈದ್ಯರ ಬಳಿಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾನೆ ನೌಕರಘಟಕ ಸ್ಥಾಪನೆಯಿಂದಾಗಿ ಆದಿವಾಸಿಗಳ ಆರೋಗ್ಯದ ಮೇಲೆ ಸಂಶೋಧನೆ ನಡೆಸುವುದು, ಅವರಿಗೆ ಹೆಚ್ಚು ಬಾಧಿಸುವ ಕಾಯಿಲೆಗಳು, ಹೆಚ್ಚು ಆಸ್ಪತ್ರೆಗೆ ಬರುವ ಸಂದರ್ಭಗಳು ಮತ್ತು ಅವರ ಆರೋಗ್ಯದ ಬಗ್ಗೆ ಸಮಗ್ರ ಅಧ್ಯಯನ ಮಾಡಲು ಈ ಕೋಶ ಸಹಕಾರಿಯಾಗಲಿದೆ ಎಂದು ಡಾ.ಸಂಜೀವ್ ಅವರು ಆಂದೋಲನಕ್ಕೆ ಮಾಹಿತಿ ನೀಡಿದರು.