Light
Dark

ಚಾ.ನಗರ : ಭಾರಿ ಮಳೆ; ಹಾಸ್ಟೆಲ್, ಆಸ್ಪತ್ರೆಗೆ ನುಗ್ಗಿದ ಮಳೆ ನೀರು

ಚಾಮರಾಜನಗರ: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಹೊಂಗನೂರು ಗ್ರಾಮದ ಸಮೀಪವಿರುವ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಆಸ್ಪತ್ರೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಹೊಂಗನೂರು ಹಾಗೂ ರೇಚಂಬಳ್ಳಿ ಮಾರ್ಗದಲ್ಲಿ ಇರುವ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ನೀರು ನುಗ್ಗಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೊಂಗನೂರಿನ ಆಸ್ಪತ್ರೆಯ ಆವರಣದಲ್ಲೂ ನೀರು ನುಗ್ಗಿದ್ದು ರಸ್ತೆಯಲ್ಲಿ ಹರಿಯುತ್ತಿರುವ ಅಗಾಧವಾದ ನೀರಿನಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೊಂಗನೂರು ಗ್ರಾಮದ ಶ್ರೀಧರ್ ಅವರು ಆಂದೋಲನ ಕ್ಕೆ ಮಾಹಿತಿ ನೀಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ