Mysore
30
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಭಿಕ್ಷುಕನ ಅಂತ್ಯಕ್ರಿಯೆ; ಮಾನವೀಯತೆ ಮೆರೆದ ಪೊಲೀಸರು

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಭಿಕ್ಷುಕನೊಬ್ಬನ ಮೃತದೇಹವನ್ನು ವಾರಸುದಾರರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಹನೂರು ಪಟ್ಟಣದಲ್ಲಿ ಪೇಪರ್, ಬಾಟಲ್ ಹಾಗೂ ಇತರೆ ಸಾಮಗ್ರಿಗಳನ್ನು ಹಾಯ್ದು ಕೊಂಡು ಅನಾಥನಂತೆ ಬದುಕು ಸಾಗಿಸುತ್ತಿದ್ದ ತಂಗರಾಜ್ ಎಂಬಾತನೇ ಮೃತ ವ್ಯಕ್ತಿ. ಶನಿವಾರ ರಾತ್ರಿ ಹನೂರು ಪಟ್ಟಣದ ಎಂ.ಎಂ.ಹಿಲ್ಸ್ ರಸ್ತೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಭಾನುವಾರ ಸಾವನ್ನಪ್ಪಿದ್ದು ಮೃತದೇಹವನ್ನು ಹನೂರು ಪೋಲೀಸ್ ಠಾಣೆಯ ಎ.ಎಸ್.ಐ ಮಧು ಕುಮಾರ್ ಅವರ ನೇತೃತ್ವದಲ್ಲಿ ಸಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಬೆಳಿಗ್ಗೆಯಿಂದ ಮೃತ ದೇಹದ ವಾರಸುದಾರರಿಗಾಗಿ ಹುಡುಕಾಟ ಆರಂಭಿಸಿದ್ದರು, ತಂಗರಾಜ್ ದೂರದ ಸಂಬಂಧಿ ಪಾಪಮ್ಮ ಮಧ್ಯಾಹ್ನದ ಹೊತ್ತಿಗೆ ಮೃತದೇಹವನ್ನು ಗುರುತುಮಾಡಿದ್ದು ಅಂತ್ಯ ಸಂಸ್ಕಾರ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಕಡು ಬಡವರಾದ ಪಾಪಮ್ಮ ಅವರ ನೇತೃತ್ವದಲ್ಲಿ ರಾತ್ರಿ ೮ ರ ಸಮಯದಲ್ಲಿ ಎ.ಎಸ್.ಐ.ಮಧು ಕುಮಾರ್ ಹಾಗೂ ಹೆಡ್ ಕಾನ್ಸ್ಟೇಬಲ್ ನಂದ ಕುಮಾರ್ ಅವರು ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಹನೂರು ಪಟ್ಟಣ ಪೊಲೀಸ್ ಠಾಣೆಯ ಎ ಎಸ್ ಐ ಮಧುಕುಮಾರ್ ಅವರು ಹನೂರು ಪಟ್ಟಣದಲ್ಲಿ ತಂಗರಾಜ್ ಎಂಬ ಭಿಕ್ಷುಕ ಭಾನುವಾರ ಸಾವನ್ನಪ್ಪಿದ್ದ, ವಾರಸುದಾರರನ್ನು ಗುರುತಿಸುವುದು ಹಾಗೂ ಹಳ್ಳ ಕೀಳುವ ಜೆಸಿಬಿ ಸಿಗದ ಕಾರಣ ಅಂತ್ಯಸಂಸ್ಕಾರ ತಡವಾಯಿತು. ಒಟ್ಟಿನಲ್ಲಿ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದೆವು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ