Mysore
18
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸರ್ಕಾರಿ ಅಸ್ಪತ್ರೆಯಲ್ಲಿ ಎಕ್ಸ್‌ರೇ ಪ್ರಿಂಟರ್ ರಿಪೇರಿ: ರೋಗಿಗಳ ಪರದಾಟ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ಎಕ್ಸ್‌ರೇ ಮಿಷನ್‌ ತೊಂದರೆಯಿಂದ ರೋಗಿಗಳು ಪರದಾಡುವಂತಾಗಿದೆ.

ಎಕ್ಸ್‌ರೇ ಮಿಷನ್‌ ರೀಪೆರಿ ಇದ್ದು, ಎಕ್ಸ್‌ರೇ ಮಾಡುತ್ತಿದ್ದಾರೆ. ಯಾಕೆ ಮಾಡುತ್ತೀರ ಎಂದರೆ ಪ್ರಿಂಟ್ ಕೊಡಲ್ಲ ಬೇಕಿದ್ದರೆ ಮಾನಿಟರ್‌ನಲ್ಲಿ ಪೋಟೋ ತೆಗೆದುಕೊಂಡಿ ಹೋಗಿ ಎನ್ನುತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದ ಮೂರು-ನಾಲ್ಕು ದಿನದ ಹಿಂದೆ ರೋಗಿಯೊಬ್ಬರು ಸರ್ಕಾರಿ ಅಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿಸಿದ್ದು ನಾಲ್ಕು ದಿನವಾದರೂ ಎಕ್ಸ್‌ರೇ ರಿಪೋರ್ಟ್ ನೀಡಿಲ್ಲ. ಇದನ್ನು‌ ಕೆಳಲು ಹೋದರೆ ಹನ್ನೊಂದು ಗಂಟೆಯಾಗಿದ್ದರೂ ವೈದ್ಯರು ಬಂದಿಲ್ಲ. ನಂತರ ಕೆಳಿದಾಗ ಬೇಕಾದರೆ ಎಕ್ಸ್ ರೇ ಪೊಟೋ ತೆಗೆದುಕೊಂಡು‌ ಹೋಗು ಪ್ರಿಂಟ್ ಬರಲ್ಲ ಕೆಟ್ಟುಹೋಗಿದೆ ಎಂದು ಬೇಜವಬ್ದಾರಿ ಉತ್ತರ ನೀಡುತ್ತಾರೆ ಎಂದು ರೊಗಿಗಳು ಆರೊಪಿಸಿದರು.

ಸರ್ಕಾರಿ ಅಸ್ಪತ್ರೆಗೆ ಬಡ ವರ್ಗದ ಜನರು ಹೆಚ್ಚಾಗಿ ಬರುತ್ತಾರೆ ಎಂಬ ಅರಿವಿದ್ದರು ಅಗತ್ಯ ಉಪಕರಣಗಳ ನವೀಕರಣ ಹಾಗೂ ಸರಿಪಡಿಸುವಿಕೆ ಮಾಡದೆ ಸಮಸ್ಯೆ ಇದೆ ಎಂದು ಹೇಳಿ ಕೈ ತೊಳೆಸುಕೊಳ್ಳುವುದು ಎಷ್ಟು ಸರಿ ಎಂದು ರೊಗಿಗಳು ಬೇಸರ ವ್ಯಕ್ತಪಡಿಸಿದರು.

ಎಕ್ಸ್ ರೇ ಮಿಷನ್ ವರ್ಕ್ ಹಾಗುತ್ತಿದೆ ಅದರೆ ಪ್ರಿಂಟರ್ ಸಮಸ್ಯೆಯಾಗಿದೆ ಆಗಾಗಿ ರೆಡಿ ಮಾಡಸಲಾಗುವುದು ಮೂಳೆ ವೈದ್ಯರು ಅಲ್ಲಿಯೇ ನೋಡಿ ಪರೀಕ್ಷಿಸುತ್ತಿದ್ದಾರೆ.

-ಡಾ. ಮಂಜುನಾಥ್, ಆಸ್ಪತ್ರೆ ಆಡಳಿತಾಧಿಕಾರಿ

ಮೂರು ದಿನದ ಹಿಂದೆ ಎಕ್ಸ್ ರೇ ಮಾಡಿಸಿದೆ ಅದರೆ ಈಗ ಎಕ್ಸ್ ರೇ ಮಿಷನ್ ಕೆಟ್ಟುಹೋಗಿದೆ ಎಂಬ ಉತ್ತರ ನೀಡುತಿದ್ದು ಮುಳೆ ವಯದ್ಯರು ಬಾಯಿಗೆ ಬಂದಂತೆ ರೊಗಿಗಳ ಜೊತೆ ವರ್ತಿಸುತ್ತಾರೆ, ಹನ್ನೊಂದು ಗಂಟೆ ಅದರು ವೈದ್ಯರು ಬರಲ್ಲ ಆಸ್ಪತ್ರೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ.

-ಸ್ವಾಮಿ, ರೋಗಿ

 

Tags:
error: Content is protected !!