Mysore
23
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಪಘಾತದಲ್ಲಿ ಇಬ್ಬರು ಎಎಸ್‌ಐಗಳಿಗೆ ಗಾಯ

ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಎಎಸ್‌ಐಗಳು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಉಡಿಗಾಲ ಗ್ರಾಮದ ಬಳಿ ನಡೆದಿದೆ.

ನಗರ ಗ್ರಾಮಾಂತರ ಠಾಣೆಯ ಮಲ್ಲಿಕಾರ್ಜುನಸ್ವಾಮಿ ಹಾಗೂ ತೆರಕಣಾಂಬಿ ಠಾಣೆಯ ಮಹದೇವಸ್ವಾಮಿ ಗಾಯಗೊಂಡಿರುವ ಎಎಸ್‌ಐಗಳು.

ಬೆರಟಹಳ್ಳಿ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದ್ವಿಚಕ್ರವಾಹನದಲ್ಲಿ ಕರ್ತವ್ಯಕ್ಕೆ ಬರುವಾಗ ತೆರಕಣಾಂಬಿ ಠಾಣೆಯಲ್ಲಿ ಸೇವೆ ಸಲ್ಲಿಸಿ ದೊಡ್ಡರಾಯಪೇಟೆ ಮಹದೇವಸ್ವಾಮಿ ಅವರೂ ಹಿಂಬದಿಯಲ್ಲಿ ಕುಳಿತು ಅವರೊಂದಿಗೆ ನಗರಕ್ಕೆ ಬರುತ್ತಿದ್ದರು. ಭಾನುವಾರ ರಾತ್ರಿ ೭.೪೫ರಲ್ಲಿ ಎದುರುಗಡೆಯಿಂದ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಉಡಿಗಾಲ ಪ್ರವೇಶದ್ವಾರದಲ್ಲಿ ಗುದ್ದಿದೆ. ಪರಿಣಾಮವಾಗಿ ಮಲ್ಲಿಕಾರ್ಜುನಸ್ವಾಮಿ ಅವರ ಭುಜ ಇನ್ನಿತರ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವ ಮಹದೇವಸ್ವಾಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ,

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ