ಹನೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿವಿ ಸೇರಿದಂತೆ ಅತ್ಯಮೂಲ್ಯ ದಾಖಲಾತಿಗಳು ಸುಟ್ಟು ಕರಕಲಾದ ಘಟನೆ ಹನೂರು ತಾಲೂಕಿನ ಬಂಡಳ್ಳಿಯಲ್ಲಿ ಶನಿವಾರ ನಡೆದಿದೆ.
ಬಂಡಳ್ಳಿ ಗ್ರಾಮದ ಜಯಲಕ್ಷ್ಮಿ ಅವರಿಗೆ ಸೇರಿದ ಮನೆಯಲ್ಲಿ ಶನಿವಾರ ಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು ಮೊದಲಿಗೆ ಟಿವಿ ಹೊತ್ತಿ ಉರಿದು ಬಳಿಕ ಮನೆಗೆ ಬೆಂಕಿ ವ್ಯಾಪಿಸಿ ಅವಘಡ ಉಂಟಾಗಿದೆ.
ಬೆಂಕಿ ವ್ಯಾಪಿಸುತ್ತಿದ್ದಂತೆ ಮನೆಯಿಂದ ಎಲ್ಲರೂ ಹೊರಕ್ಕೆ ಬಂದು ಪಾರಾಗಿದ್ದಾರೆ. ಬಳಿಕ, ಸ್ಥಳೀಯರ ಸಹಕಾರದಿಂದ ಬೆಂಕಿ ತಹಬದಿಗೆ ಬಂದಿದ್ದು ಅಷ್ಟರಲ್ಲೇ ಗೃಹೋಪಯೋಗಿ ವಸ್ತುಗಳು, ಅಮೂಲ್ಯ ದಾಖಲಾತಿಗಳು, ನಗದು ಸುಟ್ಟು ಭಸ್ಮವಾಗಿದೆ.





