Mysore
34
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಹನೂರು: ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾದ ಟಿಪ್ಪರ್‌ ವಾಹನ

ಹನೂರು: ಪಟ್ಟಣದ ಹೊರವಲಯದ ಪೊಲೀಸ್ ವಸತಿಗೃಹದ ಸಮೀಪ ಟಿಪ್ಪರ್ ಪಲ್ಟಿಯಾಗಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ( ಅಕ್ಟೋಬರ್‌ 22 ) ಬೆಳಿಗ್ಗೆ ಜರುಗಿದೆ.

ಚಾಮರಾಜನಗರದಿಂದ ಎಂ ಸ್ಯಾಂಡ್ ತುಂಬಿಕೊಂಡು ಕೊಳ್ಳೇಗಾಲ ಮಾರ್ಗವಾಗಿ ಹನೂರು ಪಟ್ಟಣಕ್ಕೆ ಟಿಪ್ಪರ್‌ ವಾಹನ ವೇಗವಾಗಿ ಬರುತ್ತಿದ್ದ ವೇಳೆ ಹನೂರು ಪಟ್ಟಣದ ಪೊಲೀಸ್ ವಸತಿಗೃಹ ಮುಂಭಾಗ ಕಾಡು ಹಂದಿಗಳ ಹಿಂಡು ಏಕಾಏಕಿ ರಸ್ತೆಗೆ ಧಾವಿಸಿದೆ. ಹಂದಿಗೆ ಡಿಕ್ಕಿ ಹೊಡೆಯವುದನ್ನು ತಪ್ಪಿಸಲು ಬಲಭಾಗಕ್ಕೆ ತಿರುಗಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಹಲವು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಟಿಪ್ಪರ್ ಪಲ್ಟಿಯಾಗಿದೆ. ಚಾಲಕ ಚೆಲುವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!