ಹನೂರು : ತಾಲ್ಲೂಕಿನ ಕೂಡ್ಲೂರು ಗ್ರಾಮದ ರೈತ ಮುಖಂಡ ವೆಂಕಟೇಶ್ ಹಾಗೂ ಸ್ನೇಹಿತರು ತಮಿಳುನಾಡಿನ ಕಡಂಬೂರು ಗ್ರಾಮಕ್ಕೆ ಶನಿವಾರ ಮಧ್ಯಾಹ್ನ ತೆರಳುತ್ತಿದ್ದ ವೇಳೆ ಮಾರ್ಗಮಧ್ಯದ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಜಲ್ಲಿ ಪಾಳ್ಯ ಗ್ರಾಮದಿಂದ ಮಾಕನಪಾಳ್ಯ ಮಾರ್ಗವಾಗಿ ಕಡಂಬೂರಿಗೆ ಟ್ರಾಕ್ಟರ್ ಮೂಲಕ ತೆರಳುತ್ತಿದ್ದಾಗ ಹುಲಿ ಪ್ರತ್ಯಕ್ಷವಾಗಿದೆ. ಇದನ್ನು ಕಂಡ ವೆಂಕಟೇಶ್ ಹಾಗೂ ಸ್ನೇಹಿತರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ವನ್ಯಜೀವಿ ಪ್ರಿಯರು ಹಾಗೂ ಸಾರ್ವಜನಿಕರು ಹುಲಿಯ ವಿಡಿಯೋ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ೫ ಹುಲಿಗಳು ಮೃತಪಟ್ಟಿದ್ದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ನಾವು ಸ್ಥಳಕ್ಕೆ ಭೇಟಿ ನೀಡಲು ತೆರಳಿದ ವೇಳೆ ಗಂಡು ಹುಲಿ ಕಾಣಿಸಿಕೊಂಡಿತ್ತು. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ಹುಲಿಗಳು ಸಂಚಾರ ಮಾಡುತ್ತಿವೆ. ಪ್ರತಿಯೊಬ್ಬರೂ ವನ್ಯ ಪ್ರಾಣಿಯನ್ನು ಸಂರಕ್ಷಣೆ ಮಾಡಬೇಕು ಎಂದು ಡಿಸಿಎಫ್ ಭಾಸ್ಕರ್ ಮನವಿ ಮಾಡಿದ್ದಾರೆ.





