Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಹುಲಿ ಸಾವು : 6 ಮಂದಿ ತಂಡ ರಚನೆ

Hanur | Suspicious Death of Four Tigers: Poisoning Suspected

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವ ವಲಯದಲ್ಲಿ ಐದು ಹುಲಿಗಳ ಅಸಹಜ ಸಾವು ತನಿಖೆಗೆ ಅರಣ್ಯ ಇಲಾಖೆ 6 ಜನರ ತಂಡ ರಚನೆ ಮಾಡಿದೆ.

ಹುಲಿಗಳ ಮೃತದೇಹ ಪರೀಕ್ಷಿಸಿದಾಗ ಮೇಲ್ನೋಟಕ್ಕೆ ವಿಷಪ್ರಾಶನದಿಂದ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಪಿಸಿಸಿಎಫ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಗುರುವಾರ ಸಂಜೆ ತಾಯಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಉಳಿದ ಹುಲಿಗಳ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗುತ್ತದೆ.

6 ಮಂದಿ ಅಧಿಕಾರಿಗಳ ತಂಡ ರಚನೆ
ಬಿ.ಪಿ ರವಿ, ಪಿಸಿಸಿಎಫ್ – ಅಧ್ಯಕ್ಷರು
ಶ್ರೀನಿವಾಸುಲು – ಎಪಿಸಿಸಿಎಫ್
ಹೀರಾಲಾಲ್ ಟಿ – ಸಿಸಿಫ್
ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿಯ ಒಬ್ಬ ಸದಸ್ಯರು
ಪಶುವೈದ್ಯಾಧಿಕಾರಿ
ಡಾ.ಸಂಜಯ್ ಗುಬ್ಬಿ – ತಜ್ಞರು

ಈ ತನಿಖಾ ತಂಡ ಘಟನಾ ಸ್ಥಳಕ್ಕೆ ನಾಳೆ ಭೇಟಿ ನೀಡಲಿದ್ದು, ಮೂರು ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

Tags:
error: Content is protected !!