ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಎಂಎಸ್‌ಐಎಲ್ ಬಾರ್‌ಗೆ ಶನಿವಾರ ತಡರಾತ್ರಿ ಕನ್ನ ಹಾಕಿರುವ ಖದೀಮರು 65 ಸಾವಿರ ರೂ ದೋಚಿ ಪರಾರಿಯಾಗಿದ್ದಾರೆ. ಆದರೆ ಒಂದೇ ಒಂದು ಮದ್ಯದ ಬಾಟಲಿಯನ್ನು ಮುಟ್ಟಿಲ್ಲ.
ಬ್ಯಾಂಕ್ ರಜೆಯಿದ್ದ ಕಾರಣ ಹಣವನ್ನೇಲ್ಲಾ ಬ್ಯಾಂಕ್ ನಲ್ಲಿಯೇ ಇಟ್ಟು ಮಾಲೀಕರು ತೆರಳಿದ್ದರು ಎಂದು ಮಾಹಿತಿ ಲಭ್ಯವಾಗಿದ್ದು, ಕಳ್ಳರು ಬಾರ್ ಬಾಗಿಲನ್ನು ತೆಗೆಯಲು ನಕಲಿ ಕೀ ಗಳನ್ನು ಬಳಸಿ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಸಂಶಯ ವ್ಯಕ್ತ ಪಡಿಸಲಾಗಿದೆ.
ಈ ಸಂಬಂಧ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





