ಹನೂರು : ನೆಮ್ಮದಿಯಾಗಿ ವಾಸಿಸಲು ಸ್ವಂತ ಸೂರಿಲ್ಲ, ಜೀವನೋಪಯಕ್ಕಾಗಿ ವೃದ್ಯಾಪ್ಯ ವೇತನವಿಲ್ಲ. ವಿಳಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲ. ತುತ್ತು ಅನ್ನಕ್ಕಾಗಿ ಪಡಿತರ ಚೀಟಿ ಇಲ್ಲ. ಪಡಿತರ ಚೀಟಿಯಿಲ್ಲದೆ ಗೃಹಲಕ್ಷ್ಮಿಯೂ ಸಿಗುತ್ತಿಲ್ಲ. ಅನ್ಯ ದಾರಿಯಿಲ್ಲದೆ ಮನೆ ಮನೆ ಊಟ ಮಾಡಿಕೊಂಡು ಪಾಳು ಮನೆಯಲ್ಲಿ ವಾಸ ಮಾಡುತ್ತಿರುವ ವೃದ್ದೆ ಪಚ್ಚಮ್ಮ ಬದುಕು ಯಾರಿಗೂ ಬೇಡವಾಗಿದೆ.
ತಾಲ್ಲೂಕಿನ ಕೆ ಗುಂಡಾಪುರ ನಿವಾಸಿ ಪಚ್ಚಮ್ಮ(62) ಎಂಬಾಕೆ ತನ್ನ ಇಳಿ ವಯಸ್ಸಿನಲ್ಲೂ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲಾಗದೆ ಏಕಾಂಗಿಯಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಪ್ರಜ್ಞಾವಂತರು ವೃದ್ಧೆ ಪಚ್ಚಮ್ಮರವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಿದೆ.
ಸ್ವಂತ ಸೂರಿಲ್ಲ:
ಕೆ ಗುಂಡಾಪುರದಲ್ಲಿ ವಾಸ ಮಾಡುತ್ತಿರುವ ಪಚ್ಚಮ್ಮ ಎಂಬ ವೃದ್ದೆಗೆ ಸ್ವಂತ ಸೂರಿಲ್ಲದೆ ಈ ಹಿಂದೆ ಅಂಗನವಾಡಿ ಕಟ್ಟಡವಾಗಿದ್ದ ಹಳೆಯ ಕಟ್ಟಡದಲ್ಲಿ ಸಾಕಷ್ಟು ವರ್ಷಗಳಿಂದಲೂ ಸಹ ವಾಸ ಮಾಡುತ್ತಿದ್ದಾರೆ. ಅದು ಸಹ ತುಂಬಾ ಹಳೆಯ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಿಂದ ಕೂಡಿದೆ. ಇದರಿಂದ ಸ್ವಂತ ಸೂರನ್ನು ಪಡೆದುಕೊಳ್ಳಲಾಗದೆ ಕೊನೆಗಳಿಗೆಯಲ್ಲೂ ಸಹ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಸರ್ಕಾರದ ಯಾವ ಭಾಗ್ಯಗಳು ಸಿಗುತ್ತಿಲ್ಲ
ಸರ್ಕಾರ ರಾಜ್ಯದ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುವ ಪಂಚ ಗ್ಯಾರಂಟಿಗಳನ್ನು ನೀಡಿದೆ. ಇತ್ತೀಚಿಗೆ ನೀಡಿರುವಂತಹ ಭಾಗ್ಯಗಳು ಬಡವರ ಪಾಲಿಗೆ ಆಶಾಕಿರಣವಾಗಿ ಉಳಿದಿದೆ ಎಂಬುದಕ್ಕೆ ಈ ವೃದ್ಧೆಯೇ ಸಾಕ್ಷಿಯಾಗಿದ್ದಾರೆ. ಯಾಕೆಂದರೆ ಇತ್ತೀಚಿಗೆ ಬಿಡುಗಡೆಯಾಗಿರುವಂತಹ ಸರ್ಕಾರದ ಸೌಲಭ್ಯಗಳು ಸರ್ಕಾರದ ಭಾಗ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸಿಗುವಂತಾಗಬೇಕು ಎಂಬುದು ಕೇವಲ ಭಾಷಣದಲ್ಲಿ ಮಾತ್ರ ಉಳಿದುಕೊಂಡಿದೆ. ಕಾರಣ ಸರ್ಕಾರ ಪ್ರತಿಯೊಬ್ಬರಿಗೂ ನೀಡಿರುವಂತಹ ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ವೃದ್ಯಾಪ್ಯ ವೇತನ ಸೇರಿದಂತೆ ಇನ್ನಿತರ ಯಾವುದೇ ಯೋಜನೆಗಳು ಇವರಿಗೆ ಸಿಗದೇ ಜೀವನವನ್ನು ದುಸ್ತರವಾಗಿ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಇಲ್ಲ
ಸಮಾಜದಲ್ಲಿ ವ್ಯಕ್ತಿಯ ನಿಖರ ವಿಳಾಸಕ್ಕಾಗಿ ಯಾವುದಾದರೂ ದಾಖಲಾತಿಗಳು ಬೇಕು. ಆದರೆ ವೃದ್ಧೆಗೆ ಇರಬೇಕಾದಂತಹ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಸಹ ಇವರಿಗೆ ಸಿಕ್ಕಿರುವುದಿಲ್ಲ. ಪರಿಣಾಮ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳಲು ಇವರಿಗೆ ಆಗುತ್ತಿಲ್ಲ. ಪಡಿತರ ಚೀಟಿ ಇಲ್ಲದ ಪರಿಣಾಮ ಅನ್ನಭಾಗ್ಯ ಯೋಜನೆ ಕೈ ಬಿಟ್ಟಿದೆ. ಪರಿಣಾಮ ಊಟಕ್ಕೂ ಸಹ ಪದಾಡುತ್ತಾ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಭಾಗ್ಯಗಳು ಸಿಗುತ್ತಿರುವ ಇಂತಹ ದಿನಮಾನಗಳಲ್ಲಿ ತಾಲ್ಲೂಕು ಕೇಂದ್ರ ಸ್ಥಾನದಿಂದ ಕೇವಲ 15 ಕಿಲೋಮೀಟರ್ ಸಮಯದಲ್ಲಿ ಇರುವಂತಹ ಗ್ರಾಮವೊಂದರ ಹುದ್ದೆಗೆ ಸಿಗುತ್ತಿಲ್ಲವೆಂದರೆ ಇನ್ನು ಉಗ್ರಮಗಳ ಜನರ ಪರಿಸ್ಥಿತಿ ಹೇಗಿರಬೇಡ ಎಂಬುದನ್ನು ಊಹೆ ಮಾಡಿಕೊಳ್ಳಬೇಕಾಗುತ್ತದೆ.
ಸರ್ಕಾರದ ಸೌಲಭ್ಯಗಳಿಂದ ವಂಚಿತರು
ಸರ್ಕಾರದಿಂದ ದೊರಕುತ್ತಿರುವ ಅನೇಕ ಸೌಲಭ್ಯಗಳನ್ನ ಪಡೆದುಕೊಳ್ಳಲು ಇವರ ಬಳಿ ಯಾವುದೇ ದಾಖಲೆಗಳಿಲ್ಲದ ಪರಿಣಾಮ ಎಲ್ಲವೂ ಸಹ ಇವರಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕಾದ ಸಹ ಕನಿಷ್ಠ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಾಗಾಗಿ ಮುಖ್ಯವಾಗಿ ಬೇಕಾಗಿರುವಂತಹ ಆಧಾರ್ ಕಾರ್ಡ್ ಪಡಿತರ ಚೀಟಿ ಇನ್ನಿತರ ದಾಖಲಾತಿಗಳನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಒದಗಿಸಿಕೊಡುವುದರ ಮೂಲಕ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳು ದೊರಕುವಂತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಇನ್ನು ಅಜ್ಜಿಯ ಸ್ಥಿತಿ ನೋಡಿದ ಯುವಕನೋರ್ವ ಅಜ್ಜಿಗೆ ಮಲಗಲು ಚಾಪೆ ಹೂದಿಕೆ ತಂದುಕೊಟ್ಟಿದ್ದಾರೆ. ಇನ್ನು ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಶಾಸಕ ಎಂ.ಆರ್.ಮಂಜುನಾಥ್ ರವರು ಅಜ್ಜಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಇದುವರೆಗೂ ಸಹ ಈ ವೃದ್ದೆಯ ಪರಿಸ್ಥಿತಿ ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳ ಕಣ್ಣಿಗೆ ಬೀಳದಿರವುದು ವಿಪರ್ಯಾಸವೇ ಸರಿ. ಹಾಗಾಗಿ ಮುಂದಾದರೂ ಅಧಿಕಾರಿಗಳು ಇತ್ತ ಗಮನಹರಿಸುವರೇ ಕಾದು ನೋಡಬೇಕಿದೆ.




