Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತೀರ್ಪುಗಾರರಿಲ್ಲದೆ ಕಂಗಾಲದ ವಿದ್ಯಾರ್ಥಿಗಳು!

ಹನೂರು :ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತೀರ್ಪುಗಾರರು ಇಲ್ಲದೆ ಕ್ರೀಡಾಕೂಟವನ್ನು ಗುರುವಾರಕ್ಕೆ ಮುಂದೂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಕೋಶ ಹೊರ ಹಾಕಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜು ಹನೂರು, ಜೆಎಸ್ಎಸ್ ಪದವಿ ಪೂರ್ವ ಕಾಲೇಜು ರಾಮಪುರ ಇವರ  ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ
ಜಿಲ್ಲಾ ಮಟ್ಟದ ಪದವಿ ಪೂರ್ವ  ಕ್ರೀಡಾಕೂಟದಲ್ಲಿ 5 ತಾಲೂಕಿನಿಂದ ಹಲವಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು ಆದರೆ ಸ್ಪರ್ಧೆಗೆ ತಕ್ಕಂತೆ ತೀರ್ಪುಗಾರರು ಇಲ್ಲದೆ ಇರುವುದರಿಂದ ಒಂದು ದಿನಕ್ಕೆ ಮುಗಿಯುಬೇಕಿದ್ದ ಕ್ರೀಡಾಕೂಟ ಎರಡನೇ ದಿನಕ್ಕೆ ಮುಂದೂಡಲಾಗಿದೆ. ಇದರಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಸಮರ್ಪಕ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಇಲ್ಲದೆ ಪಂದ್ಯವನ್ನು ನಾಳೆಗೆ ಮುಂದೂಡಿದರೆ ನಾವು ಯಾವ ರೀತಿ ಮತ್ತೆ ಬರಲು ಸಾಧ್ಯ, ನೀವು ಕ್ರೀಡಾಕೂಟವನ್ನು ಬುಧವಾರವೇ ಮುಗಿಸಬೇಕು ಎಂದು ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ಕ್ರೀಡಾಕೂಟ ಆಯೋಜನೆ ಮಾಡಿದ್ದ ಸಂಸ್ಥೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವೇಕಾನಂದ ಸಂಸ್ಥೆಯ ಪ್ರಾಂಶುಪಾಲ ಮಧುಸೂಧನ್ ರವರು ಸಮಯದ ಅಭಾವದಿಂದ ಈ ರೀತಿಯಾಗಿದೆ .ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ಸಮಾಧಾನಪಡಿಸಿದರು ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶವಾಗಿ ಹೊರ ನಡೆದ ಘಟನೆ ಜರುಗಿದೆ.

Tags: