Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹನೂರು: ಉಡುತೊರೆ ಎಡದಂಡೆ, ಬಲದಂಡೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಹನೂರು: ತಾಲೂಕಿನ ಉಡುತೊರೆ ಜಲಾಶಯ ವ್ಯಾಪ್ತಿಗೆ ಬರುವ ಎಡ ಹಾಗೂ ಬಲದಂಡೆ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿಗೆ ಶಾಸಕ ಎಂ ಆರ್ ಮಂಜುನಾಥ್ ರವರು ಚಾಲನೆ ನೀಡಿದರು.

ನಂತರ ಶಾಸಕ ಎಂಆರ್ ಮಂಜುನಾಥ್ ಮಾತನಾಡಿ ಕಳೆದ ಎರಡು ತಿಂಗಳ ಹಿಂದೆ ಉತ್ತಮ ಮಳೆಯಾದ ಹಿನ್ನೆಲೆ ಉಡುತೊರೆ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಆದರೆ ಜಲಾಶಯದ ಕಾಲುವೆಗಳು ಮುಚ್ಚು ಹೋಗಿದೆ. ಇನ್ನು ಕೆಲವು ಕಡೆ ಗಿಡಗಂಟಿಗಳು ಬೆಳೆದಿರುವುದರಿಂದ ರೈತರುಗಳಿಗೆ ಅನುಕೂಲ ಕಲ್ಪಿಸಲು ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಜಲಾಶಯದಿಂದ ನೀರು ಬಿಟ್ಟಾಗ ರೈತರುಗಳಿಗೆ ಸಮರ್ಪಕ ನೀರು ತಲುಪುತ್ತಿರಲಿಲ್ಲ, ಇದರಿಂದ ನೀರು ವ್ಯರ್ಥವಾಗುತ್ತಿತ್ತು, ಈ ನಿಟ್ಟಿನಲ್ಲಿ ಜಲಾಶಯದ ಹೂಳು ತೆಗೆಯಲು ಕ್ರಿಯ ಯೋಜನೆ ರೂಪಿಸಿ ಅನುಮೋದನೆ ದೊರೆತ ನಂತರ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜಲಾಶಯದಲ್ಲಿ ಇರುವ ಹನಿ ಹನಿ ನೀರನ್ನು ಕಾಪಾಡಿಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಿ ರೈತರು ಆರ್ಥಿಕವಾಗಿ ಸದೃಢವಾಗಬೇಕಿದೆ. ಹೂಳು ತೆಗೆದ ನಂತರ ಚಾನಲ್ ಸ್ವಚ್ಛ ಗೊಳಿಸಿದ ನೀರು ಹರಿಸಿದರೆ ಕೊನೆಯ ಭಾಗದವರೆಗೂ ನೀರು ಹರಿದು ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗಿದೆ ಎಂದರು.

ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ: ಉಡುತೊರೆ ಜಲಾಶಯ ನಿರ್ಮಾಣ ಕಾಮಗಾರಿಗೆ ಸರ್ಕಾರ ರೈತರ ಜಮೀನುಗಳನ್ನು ಈಗಾಗಲೇ ಭೂಸ್ವಾದಿನ ಪಡಿಸಿಕೊಂಡಿದೆ ಈ ನಿಟ್ಟಿನಲ್ಲಿ ಅಜ್ಜೀಪುರ ಹಾಗೂ ಬಸಪ್ಪನ ದೊಡ್ಡಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ನಾಲೆಗಳ ಸಮೀಪ ಗಿಡ ನೆಡುವುದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಇದಲ್ಲದೆ ದಣಿದು ಬರುವ ರೈತರಿಗೂ ನೆರವಾಗಲಿರುವುದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇವೇಳೆ ಅಜ್ಜೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರ ನಾಯಕ್, ಉಪಾಧ್ಯಕ್ಷರಾದ ಪ್ರಭುಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚಂದ್ರ ಮುರಳಿ, ರಾಜೇಂದ್ರ, ಸೈಯದ್ ಜಬ್ಬಾರ್, ಕೃಷ್ಣಮೂರ್ತಿ, ಶಿವಮೂರ್ತಿ ರಾಜೇಶ್, ಪಿಡಿಓ ನಂದೀಶ್, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಇನ್ನಿತರರು ಹಾಜರಿದ್ದರು.

Tags: