Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಏ. 24 ರಂದು ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ; ಅಧಿಕಾರಿಗಳಿಂದ ಭರದ ಸಿದ್ಧತೆ

mahadeshwara hill (1)

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಏ.೨೪ ರಂದು ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಅಧಿಕಾರಿಗಳೊಂದಿಗೆ ಮಹದೇಶ್ವರಬೆಟ್ಟಕ್ಕೆ ತೆರಳಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಸಚಿವ ಸಂಪುಟ ಸಭೆ ನಡೆಯುವ ಮಹದೇಶ್ವರಬೆಟ್ಟದ ದೀಪದ ಗಿರಿ ಒಡ್ಡು, ಹೆಲಿಪ್ಯಾಡ್, ಚೆಕ್‌ಪೋಸ್ಟ್ ಸ್ಥಳಗಳಿಗೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಸಚಿವ ಸಂಪುಟ ಸಭೆ ನಡೆಯುವ ದಿನಗಳಲ್ಲಿ ಮಹದೇಶ್ವರಬೆಟ್ಟಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು. ಬೆಟ್ಟದ ಪೆಟ್ರೋಲ್ ಬಂಕ್ ಬಳಿಯೇ ಪ್ರತ್ಯೇಕವಾಗಿ ಭಕ್ತರು ದೇವಸ್ಥಾನಕ್ಕೆ ತೆರಳಲು ಅವಕಾಶ ಕಲ್ಪಿಸಬೇಕು. ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಉಳಿದಂತೆ ವಿಐಪಿಗಳು ಆಗಮಿಸಿದ ವೇಳೆ ರಸ್ತೆಯನ್ನು ಬಂದ್ ಮಾಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಅಲ್ಲದೇ ಹೆಲಿಪ್ಯಾಡ್ ಬಳಿಗೆ ತೆರಳಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈಗಾಗಲೇ ಇರುವ ಒಂದು ಹೆಲಿಪ್ಯಾಡ್ ಜೊತೆಗೆ ಮತ್ತೆ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಬೇಕು. ಸಚಿವ ಸಂಪುಟ ಸಭೆಗೆ ಹಾಜರಾಗುವ ಸಚಿವರು ಹಾಗೂ ಶಾಸಕರ ಆಪ್ತರಿಗೆ ಸಭೆ ನಡೆಯುವ ಸ್ಥಳಕ್ಕೆ ಅವಕಾಶವಿರುವುದಿಲ್ಲ. ಸಭೆಗೆ ಬರುವ ಸಚಿವರು, ಶಾಸಕರನ್ನು ದೀಪದ ಗಿರಿ ಒಡ್ಡುವಿಗೆ ತಲುಪಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ತಮಿಳುನಾಡು ಚೆಕ್‌ಪೋಸ್ಟ್ ಹಾಗೂ ಕೊಳ್ಳೇಗಾಲ ಚೆಕ್‌ಪೋಸ್ಟ್ ವೀಕ್ಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ,ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ,ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಡಿವೈಎಸ್ಪಿ ಧರ್ಮೇಂದ್ರ ಸೇರಿದಂತೆ ಇತರರಿದ್ದರು.

Tags:
error: Content is protected !!