Mysore
24
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಚಾಮರಾಜನಗರ ಅರಣ್ಯ ವಲಯದಲ್ಲಿ ಹೆಚ್ಚಿದ ಬೇಟೆಗಾರರ ಹಾವಳಿ: 16 ವರ್ಷಗಳಲ್ಲಿ 3,289 ಪ್ರಕರಣ ದಾಖಲು..!

ಚಾಮರಾಜನಗರ: ಚಾಮರಾಜನಗರ ಅರಣ್ಯ ವಲಯದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದೆ.

ಕಳೆದ 16 ವರ್ಷಗಳಲ್ಲಿ ಬರೋಬ್ಬರಿ 3,289 ವನ್ಯಜೀವಿ ಅಪರಾಧ ಪ್ರಕರಣಗಳು ದಾಖಲಾಗಿವೆ.

ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲೇ ಒಟ್ಟು 2,256 ವನ್ಯಜೀವಿ ಅಪರಾಧ ಪ್ರಕರಣಗಳು ದಾಖಲಾಗಿವೆ.

ಇನ್ನು, ಕೊಳ್ಳೇಗಾಲದ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಬಫರ್‌ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಈ ಅವಧಿಯಲ್ಲಿ ಬಫರ್‌ ವಲಯವೊಂದರಲ್ಲೇ 979 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

Tags:
error: Content is protected !!