Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ಹನೂರು: ಪಿ.ಜಿ.ಪಾಳ್ಯ ಸಫಾರಿ ವೇಳೆ ಅಪರೂಪದ ಕರಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರು ಫುಲ್‌ ಖುಷ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯ ವ್ಯಾಪ್ತಿಯಲ್ಲಿ ಸಫಾರಿ ವೇಳೆ ಪ್ರವಾಸಿಗರಿಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.

ಲೊಕ್ಕನಹಳ್ಳಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಕಪ್ಪು ಚಿರತೆ ದರ್ಶನ ನೀಡಿದ್ದು, ಪ್ರವಾಸಿಗರು ಫುಲ್‌ ಖುಷ್‌ ಆಗಿದ್ದಾರೆ.

ಬೇಸಿಗೆಯಾಗಿರುವುದರಿಂದ ಆಹಾರ ನೀರು ಅರಸಿ ಅಲೆದಾಡುತ್ತಿರುವ ಚಿರತೆ ಹಾಗೂ ಇನ್ನಿತರ ವನ್ಯಪ್ರಾಣಿಗಳು ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ನೀಡುತ್ತಿವೆ.

ಮೆಲನಿನ್ ಅಂಶ ಹೆಚ್ಚಾಗಿ ಇರುವ ಚಿರತೆ ಮೈ ಬಣ್ಣ ಸಾಮಾನ್ಯವಾಗಿ ಕಪ್ಪಾಗಿ ಇರುತ್ತದೆ. ಆದರೆ ಸಾಮಾನ್ಯ ಚಿರತೆಗೆ ಇರುವ ಪಟ್ಟಿಗಳೇ ಇರುತ್ತೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Tags:
error: Content is protected !!