Mysore
21
broken clouds

Social Media

ಸೋಮವಾರ, 23 ಫೆಬ್ರವರಿ 2026
Light
Dark

ಡಾ. ರಾಜಕುಮಾರ್ ಸಹೋದರಿ ನಾಗಮ್ಮ ನಿಧನ

ಚಾಮರಾಜನಗರ: ವರನಟ ಡಾ.ರಾಜಕುಮಾರ್ ಸಹೋದರಿ ನಾಗಮ್ಮ 94 ವರ್ಷ ಗಾಜನೂರಿನಲ್ಲಿ(95) ನಿಧನರಾಗಿದ್ದಾರೆ. ಇಂದು 11 ಗಂಟೆಯಲ್ಲಿ ಚಾಮರಾಜನಗರ ಜಿಲ್ಲೆಯ ತಾಳವಾಡಿ ತಾಲೂಕಿನ ಗಾಜನೂರಿನಲ್ಲಿ ವಯೋಸಹಜ ಅನಾರೋಗ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ. ಅಣ್ಣಾವ್ರು ರಾಜ್‌ಕುಮಾರ್‌ ಅವರು ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ ಅವರು ವಾಸವಿದ್ದರು. ಈ ನಡುವೆ ಅವರು ಕೆಲವು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಇದೀಗ ನಿಧನರಾಗಿದ್ದಾರೆ. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳಚಿದ ಕೊಂಡಿ ನಾಗಮ್ಮ ಅವರು ಡಾ. ರಾಜಕುಮಾರ್ ಅವರ ಸೋದರ ಸೋದರಿಯರ ಕೊನೆಯ ಕೊಂಡಿಯಾಗಿದ್ದರು. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ಡಾ. ರಾಜಕುಮಾರ್, ವರದರಾಜು, ಶಾರದಮ್ಮ, ನಾಗಮ್ಮ ನಾಲ್ವರು ಮಕ್ಕಳಿದ್ದರು.

Tags:
error: Content is protected !!