Mysore
25
scattered clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಹನೂರು| ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳ ವಿರುದ್ಧ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಕೇಂದ್ರ ಸರ್ಕಾರ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಜಾರಿಗೆ ತರಲು ಮುಂದಾದ ಶೇ.೩೩ರಷ್ಟು ಮಹಿಳಾ ಮೀಸಲಾತಿಯ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ಮಲೆ ಮಹದೇಶ್ವರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮೀನಾ ನೇತೃತ್ವದಲ್ಲಿ ಕೌದಳ್ಳಿ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ತಾಲೂಕಿನ ಕೌದಳ್ಳಿ ಗ್ರಾಮದ ಮಹದೇಶ್ವರ ಬೆಟ್ಟಕ್ಕೆ ತೆರಳುವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿವರೆಗೂ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹಾಗೂ ಇತರೆ ಮಿತ್ರ ಪಕ್ಷಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಮೀನಾ ಮಾತನಾಡಿ, ದೇಶದಲ್ಲಿ ೭೦ ಕೋಟಿ ಮಹಿಳೆಯರಿದ್ದು, ನಮ್ಮ ಹಕ್ಕನ್ನು ಕೇಳುವಂತಹ ಪರಿಸ್ಥಿತಿ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಮಹಿಳೆಯರಿಗೆ ರಾಜಕೀಯ ಹಕ್ಕು ಕೊಡಬೇಕು ಎಂದು ಹೇಳಲಾಗುತ್ತದೆ. ೨೦೨೩ರಲ್ಲಿ ಬಿಲ್ ಪಾಸ್ ಆಗಿದೆ. ಆದರೆ ಬಿಲ್ ಪಾಸ್ ಆಗಿದ್ದರೂ ಜಾರಿಗೆ ತರದಿರುವುದು ವಿಪರ್ಯಾಸ ಎಂದರು.

ಮಹಿಳೆಯರನ್ನು ಹಿಂದೆ ಎಳೆಯುವಂತ ಕೆಲಸ ಬೇಡ. ಶೇ.೫೦ರಷ್ಟು ಮಹಿಳೆಯರಿದ್ದೇವೆ. ಆದರೆ, ಶೇ.೩೩ ರಷ್ಟು ಕೊಡಲು ಒದ್ದಾಡುತ್ತಿದ್ದು ೨೦೨೩ರಲ್ಲಿ ನಾರಿಶಕ್ತಿ ವಂದನ್ ಅಧಿನಿಯಮ ಆಗಿದೆ. ಅದನ್ನು ೨೦೨೬ರಲ್ಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ೧೯೭೧ರ ಜನಸಂಖ್ಯೆ ಇಟ್ಟುಕೊಂಡು ಸಂಸತ್ ಹಾಗೂ ವಿಧಾನಸಭೆಯಲ್ಲಿ ಅಂಕಿಅಂಶಗಳನ್ನು ನೋಡಿದಾಗ ರಾಜ್ಯದಲ್ಲಿ ೨೪೪ಕ್ಕೆ ಇರುವಂತದ್ದು ೨೦-೩೦ ಅಲ್ಲದೇ ಸಂಸತ್‌ನಲ್ಲಿ ೭೫-೮೦ ರಷ್ಟು ಮಹಿಳೆಯರಿದ್ದೇವೆ ಎಂದರು.

ಮಹಿಳೆಯರಲ್ಲಿ ಸಾಕಷ್ಟು ಸಾಮರ್ಥ್ಯಗಳಿದ್ದು ಪಕ್ಷಾತೀತವಾಗಿ ಮಹಿಳೆಯರಿಗೆ ಇರುವ ಶೇ.೩೩ರಷ್ಟು ಮೀಸಲಾತಿಯನ್ನು ಜಾರಿಗೆ ತರಬೇಕು. ೨೦೧೧ ಜನಗಣತಿಯನ್ನು ಇಟ್ಟುಕೊಂಡರು ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ಕೊಡಬಹುದು. ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರಿಗೆ ವಿರೋಧವಾಗಿದೆ. ಗ್ರಾಪಂ, ತಾಪಂ, ಜಿಪಂ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಲೆಯೂರು ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲ, ಮಂಡಲ ಪ್ರಧಾನ ಕಾರ್ಯದರ್ಶಿ ರಾಧಾ, ಉಪಾಧ್ಯಕ್ಷೆ ಈಶ್ವರಿ, ಕಾರ್ಯದರ್ಶಿ ಶೋಭಾ, ಜ್ಯೋತಿ ಪ್ರೇಮಾ, ಸೆಲ್ವಿ, ನಿರ್ಮಲ. ರಂಜಿನಿ ಮಂಜು, ವಿಜಯ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಹಿಳಾ ಸದಸ್ಯರು ಭಾಗಿಯಾಗಿದ್ದರು

 

Tags:
error: Content is protected !!