ಹನೂರು: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಮಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 25 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಅಧ್ಯಕ್ಷ ಮುತ್ತುರಾಮ್ ತಿಳಿಸಿದರು.
ತಾಲೂಕಿನ ರಾಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಹಕಾರ ಸಂಘದ ವತಿಯಿಂದ ರಾಮಾಪುರ ಹೋಬಳಿ ವ್ಯಾಪ್ತಿಯ 362 ಷೇರುದಾರರಿಗೆ 3 ಕೋಟಿ 73 ಲಕ್ಷ ಸಾಲ ನೀಡಲಾಗಿದ್ದು ಎಲ್ಲರೂ ಮರುಪಾವತಿ ಮಾಡಿರುವುದರಿಂದ ಪ್ರಸಕ್ತ ವರ್ಷ 2,34,915ಗಳು ಲಾಭ ಬಂದಿದೆ. ನಾವು ಅಧಿಕಾರಕ್ಕೆ ಬರುವ ಮುನ್ನ 7 ಲಕ್ಷ ಸಾಲದ ಸುಳಿಯಲ್ಲಿ ಇದ್ದು. ಅಧಿಕಾರ ವಹಿಸಿಕೊಂಡ ನಾಲ್ಕು ವರ್ಷಗಳಲ್ಲಿ ಎಲ್ಲಾ ಸರ್ವ ಸದಸ್ಯರ ಸಹಕಾರದಿಂದ ಸಂಘವನ್ನು ಲಾಭದತ್ತ ಕೊಂಡೊಯ್ದಿದ್ದೇನೆ. ಷೇರುದಾರ ಕುಟುಂಬಗಳಿಗೆ ಯಾವುದೇ ರೀತಿಯ ಶುಲ್ಕವಿಲ್ಲದೆ ಉಚಿತ ಯಶಸ್ವಿನಿ ಯೋಜನೆ ಮಾಡಿಸಿಕೊಟ್ಟಿದ್ದೇವೆ. ಇದಲ್ಲದೆ ಸಂಘದ ವತಿಯಿಂದ ತೆರೆಯಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ 2 ಲಕ್ಷ ರೂಪಾಯಿ ಆದಾಯ ಬಂದಿದೆ, ಸಂಘವು 18 ಲಕ್ಷ ಲಾಭ ಪಡೆದಿರುವುರಿಂದ ಹದಿನೈದು ಲಕ್ಷ ಲಾಭದ ಹಣವನ್ನು ಎಫ್ ಡಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮಪುರ ಹೋಬಳಿ ವ್ಯಾಪ್ತಿಯ ರೈತರವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಸಗೊಬ್ಬರ ಮಾರಾಟ ಹಾಗೂ ನ್ಯಾಯಬೆಲೆ ಅಂಗಡಿ ತೆರೆಯಲು ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಅನುಮತಿ ಸಿಕ್ಕರೆ ಇನ್ನಷ್ಟು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆಲವೊಮ್ಮೆ ಮಳೆಗಾಲದ ಸಂದರ್ಭದಲ್ಲಿ ನಮ್ಮ ಭಾಗದ ರೈತರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆ ಕೊಟ್ಟು ರಸಗೊಬ್ಬರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ಇದೆ .ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಸಗೊಬ್ಬರ ಮಾರಾಟ ಮಾಡಲು ಆದಷ್ಟು ಬೇಗ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಮೋಟೆಯ್ಯ ಗೌಂಡರ್, ನಿರ್ದೇಶಕರುಗಳಾದ ಎಂ ಕೃಷ್ಣ ನಾಯಕ್, ಮಹಾದೇವ ಎಂ, ಕೃಷ್ಣಮೂರ್ತಿ ಕೆ, ಸಿಂಗಾರ ವೇಲನ್, ಕೃಷ್ಣಮೂರ್ತಿ ಸಿ, ಜ್ಯೋತಿ, ಸುರೇಶ್, ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ ಪ್ರತಿನಿಧಿ ಬಾಲಾಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಸಹಾಯಕಿ ಶ್ವೇತ, ಮುಖಂಡರಾದ ಅಶ್ವಥ್ ಹಾಜರಿದ್ದರು.