ಹನೂರು: ತಾಲೂಕಿನ ಗಡಿ ಗ್ರಾಮ ಪಾಲಾರ್‌ನಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣಕ್ಕೆ ಬುಡಕಟ್ಟು ಕುಟುಂಬಗಳು ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ತಾವಿರುವ ಸ್ಥಳದಿಂದ ಕೇವಲ 50 ಮೀಟರ್ ಅಂತರದಲ್ಲೇ ವಿದ್ಯುತ್ ಲೈನ್ ಇದ್ದರೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುತ್ತಿಲ್ಲ. ವಿದ್ಯುತ್ ವ್ಯವಸ್ಥೆ ಮಾಡಿಕೊಡದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.





