ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.ನಾಗರತ್ನಮ್ಮ ಅವರ ಹೆಸರನ್ನು ಗುಂಡ್ಲುಪೇಟೆ ಪಟ್ಟಣದ ಯಾವುದಾದರೂ ಪ್ರಮುಖ ರಸ್ತೆಗೆ ಇಡಬೇಕು ಹಾಗೂ ನಾಗರತ್ನಮ್ಮ ಅವರ ಪುತ್ಥಳಿ ನಿರ್ಮಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಲ್ ನಾಗರಾಜು ಒತ್ತಾಯಿಸಿದರು.
ಈ ಕುರಿತು ಆಂದೋಲನದೊಂದಿಗೆ ಮಾತನಾಡಿದ ಅವರು, ನಾನು ಈ ವಿಚಾರವಾಗಿ ಕಳೆದ ಒಂದು ವರ್ಷದ ಹಿಂದೆಯೇ ಪುರಸಭೆ ಮುಖ್ಯಾಧಿಕಾರಿಯವರಿಗೆ ಒತ್ತಾಯಿಸಿದ್ದೆ, ಆದರೆ ಹೆಸರಿಟ್ಟರು ಪುತ್ಥಳಿ ನಿರ್ಮಾಣ ಮಾಡಲು ರಾಜಕಾರಣಿಗಳ ಕೇಳಬೇಕು ಎಂಬ ಉಡಾಪೆ ಉತ್ತರ ನೀಡಿದ್ದರು. ಮುಂದಿನ ದಿನಗಳಲ್ಲಿ ರಸ್ತೆಗೆ ಅವರ ಹೆಸರಿಟ್ಟು ಪುತ್ಥಳಿ ನಿರ್ಮಿಸದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಗುಂಡ್ಲುಪೇಟೆ ಗಡಿ ಭಾಗದಲ್ಲಿ ಪರಭಾಷಿಕರ ಹಾವಳಿ ಹೆಚ್ಚಿದ್ದು, ನಮ್ಮ ಗುಂಡ್ಲುಪೇಟೆ ತಾಲ್ಲೂಕಿನ ರೈತರು ಜಮೀನು ಮಾರಿಕೊಳ್ಳಬಾರದು, ಗುಂಡ್ಲುಪೇಟೆ ರಸ್ತೆಗಳಲ್ಲಿ ಮಲೆಯಾಳಿ ನಾಮಫಲಕಗಳೆ ಹೆಚ್ಚಿದ್ದು ಬೇಕರಿ, ಅಂಗಡಿ, ಹೋಂ ಸ್ಟೇ, ಕೇರಳಿಗರದೆ ಹೆಚ್ಚಿದ್ದು ಇದರ ವಿರುದ್ದ ಕೆಲವೇ ದಿನಗಳಲ್ಲಿ ಚಳುವಳಿ ನಡೆಸಲಾಗುವುದು ಎಂದರು.





