Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಂಡೀಪುರದಲ್ಲಿ ಮರಿಯಾನೆ ರಕ್ಷಣೆಗೆ ನಿಂತ ತಾಯಾನೆ

ಚಾಮರಾಜನಗರ: ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ಮರಿಯಾನೆಯನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತಿದ್ದ ವ್ಯಾಘ್ರನನ್ನು ತಾಯಿ ಆನೆ ಹಿಮ್ಮೆಟ್ಟಿಸಿದೆ.

ಅರಣ್ಯದ ಸಫಾರಿ ವಲಯದಲ್ಲಿ ತಾಯಿ ಆನೆಯ ಜೊತೆ ಮರಿಯಾನೆ ಖುಷಿ ಖುಷಿಯಾಗಿ ಮೇವು ಸೇವಿಸುತ್ತಿತ್ತು.

ಆ ಸಮೀಪದಲ್ಲೇ ಇದ್ದ ಹುಲಿಯೊಂದು ಮರಿಯಾನೆಯನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತಿತ್ತು.

ಹುಲಿ ಮರಿಯಾನೆ ಮೇಲೆ ದಾಳಿ ಮಾಡುವ ಮುನ್ಸೂಚನೆ ಅರಿತ ತಾಯಿ ಆನೆ ಹುಲಿಯ ಮೇಲೆ ಪ್ರತಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಹುಲಿ ಅಲ್ಲಿಂದ ಕಾಲ್ಕಿತ್ತಿದೆ.

ಈ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.

 

Tags: