Mysore
22
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮರಳು ಮಾಫಿಯಾ ದೊರೆಗೆ ಮರುಳು ಆಗ್ಬೇಡಿ; ʼಗೋಬ್ಯಾಕ್‌ ಸುನಿಲ್ ಬೋಸ್‌ʼ ಪೋಸ್ಟರ್‌ ಅಭಿಯಾನ

ಚಾಮರಾಜನಗರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸುನಿಲ್‌ ಬೋಸ್‌ ಕಣಕ್ಕಿಳಿಯಲಿದ್ದಾರೆ. ಇಂದು ( ಏಪ್ರಿಲ್‌ 3 ) ನಾಮಪತ್ರ ಸಲ್ಲಿಸಿರುವ ಸುನಿಲ್ ಬೋಸ್‌ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದಾರೆ. ಇಂದು ಭಾರೀ ಗುಂಪಿನ ಜನ ಬೆಂಬಲದೊಂದಿಗೆ ನಾಮಪತ್ರವನ್ನೂ ಸಹ ಸುನಿಲ್ ಬೋಸ್‌ ಸಲ್ಲಿಸಿದ್ದಾರೆ.

ಒಂದೆಡೆ ಸುನಿಲ್‌ ಬೋಸ್‌ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಮತ್ತೊಂದೆಡೆ ನಗರದ ಬೀದಿ ಬೀದಿಗಳಲ್ಲಿ ʼಗೋ ಬ್ಯಾಕ್‌ ಸುನಿಲ್‌ ಬೋಸ್‌ʼ ಪೋಸ್ಟರ್‌ಗಳು ರಾರಾಜಿಸಿವೆ. ಹೌದು, ʼಮರಳು ಮಾಫಿಯಾ ದೊರೆಗೆ ಮರುಳು ಆಗ್ಬೇಡಿ, ಗೋಬ್ಯಾಕ್‌ ಸುನಿಲ್‌ ಬೋಸ್‌ʼ ಹಾಗೂ ʼಮರಳು ಮಾಫಿಯಾದ ಅನಭಿಷಿಕ್ತ ದೊರೆʼ ಎಂದು ಸುನಿಲ್‌ ಬೋಸ್‌ ಭಾವಚಿತ್ರದ ಮೇಲೆ ʼಎಕ್ಸ್‌ʼ ಚಿಹ್ನೆ ಬರೆದಿರುವ ಪೋಸ್ಟರ್‌ಗಳು ಚಾಮರಾಜನಗರದ ಹಲವು ರಸ್ತೆಯ ಗೋಡೆಗಳ ಮೇಲೆ ಕಂಡುಬಂದಿದೆ. ರಾತ್ರೋರಾತ್ರಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

Tags:
error: Content is protected !!