ಚಾಮರಾಜನಗರ : ತಾಲ್ಲೂಕಿನ ಕಡುವಿನಕಟ್ಟೆ ಹುಂಡಿ ಗ್ರಾಮದ ಕುಮಾರ್ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆ ಸೆರೆಯಾಗಿದೆ.
ಸುತ್ತಮುತ್ತಲ ಗ್ರಾಮಗಳಾದ ಶಿವಪುರ, ವೀರನಪುರ ಜಮೀನುಗಳ ವ್ಯಾಪ್ತಿಯಲ್ಲಿ ಈ ಚಿರತೆಯು ಕಳೆದ ಕೆಲ ದಿನಗಳಿಂದ ಉಪಟಳ ನೀಡಿ ಜಾನುವಾರುಗಳು, ನಾಯಿಗಳನ್ನು ಕೊಂದುಹಾಕಿತ್ತು.
ಇದರಿಂದ ಭಯಭೀತರಾಗಿದ್ದ ರೈತರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದರು. ಅರಣ್ಯ ಇಲಾಖೆಯವರು ಕುಮಾರ್ ಅವರ ಜಮೀನಿನ ಬಳಿ ಬೋನನ್ನು ಇಟ್ಟಿದ್ದರು. ಗುರುವಾರ ಚಿರತೆ ಬೋನಿಗೆ ಬಿದ್ದಿದೆ. ಈ ವಿಷಯ ತಿಳಿದ ಗ್ರಾಮಗಳ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.





