.
ಕೊಳ್ಳೇಗಾಲ: ವಿವಿಧ ಪಕ್ಷವನ್ನು ತೊರೆದು ಪೆದ್ದನಪಾಳ್ಯ ಗ್ರಾಮದ ಮುಖಂಡರು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಪಕ್ಷವನ್ನು ಇಂದು ಸೇರ್ಪಡೆಯಾದರು.
ಪಟ್ಟಣದ ಹೊಸಕುರುಬರ ಬೀದಿಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾ.ಪಂ. ಪೆದ್ದನಪಾಳ್ಯ ಗ್ರಾಮದ ಶಿವು, ಮಾರ್ಕಂಡ, ಶಿವಲಿಂಗ, ಸ್ವಾಮಿ, ಮುನಿಯಪ್ಪ, ಶಿವು ಸೇರಿದಂತೆ ಯುವಕರು ಮಾತನಾಡಿ, ಜೆಡಿಎಸ್ ಪಕ್ಷ ಹಾಗೂ ಜಿಲ್ಲಾಧ್ಯಕ್ಷ ಎಂ.ಆರ್.ಮಂಜುನಾಥ್ ರವರ ಮೇಲಿನ ನಂಬಿಕೆ, ವಿಶ್ವಾಸದಿಂದಾಗಿ ನಾವುಗಳು ವಿವಿಧ ಪಕ್ಷವನ್ನು ತೊರೆದು ಇಂದು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಶಾಲನ್ನು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಅನೇಕರು ವಿವಿಧ ಪಕ್ಷವನ್ನು ತೊರೆದು ನಮ್ಮ ಪಕ್ಷವನ್ನು ಸೇರ್ಪಡೆಯಾಗುತ್ತಿರುವುದು ಹೆಚ್ಚಿನ ಬಲ ಸಿಕ್ಕಿದಂತಾಗಿದೆ. ಇದ್ದರಿಂದಾಗಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಹನೂರು ಕ್ಷೇತ್ರದಲ್ಲಿ ಗೆಲವು ಸಾಧಿಸುವ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಿವಮೂರ್ತಿ, ಚಾಮುಲ್ ನಿರ್ದೇಶಕ ಪ್ರಸಾದ್, ಜೆಡಿಎಸ್ ಮುಖಂಡರಾದ ಜೆಸಿಮ್ಮ ಪಾಷ, ಕೌಸರ್, ಪೀಣ್ಯ ಮಾದೇವ, ಮಂಜೇಶ್ ಗೌಡ, ಸೆಲ್ವಂ, ಮಂಜೇಗೌಡ, ಡಿ.ಕೆ ರಾಜು, ವೆಂಕಟೇಶ್, ಶರತ್, ಮಹದೇವಣ್ಣ ಸೇರಿದಂತೆ ಅನೇಕರು ಇದ್ದರು.





