Mysore
22
overcast clouds
Light
Dark

ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ದ್ವಂಸ ಪ್ರಕರಣ: ಕಾಡಿನಲ್ಲಿದ್ದ ಜನರನ್ನು ಗ್ರಾಮಕ್ಕೆ ಕರೆತಂದ ಜಿಲ್ಲಾಡಳಿತ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭಿತಿಯಲ್ಲಿದ್ದ ಗ್ರಾಮದ ಜನರು ಕಾಡಿನಲ್ಲಿ ಅವಿತಿದ್ದರು. ಈ ಜನರ ಮನವೊಲಿಸಿ ಮತ್ತೆ ಗ್ರಾಮಕ್ಕೆ ಕರೆತರುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿರುವ ಜಿಲ್ಲಾಡಳಿತ, ಪ್ರಕರಣದಲ್ಲಿ ಭಾಗಿಯಾಗಿರುವವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುವುದು, ಉಳಿದವರು ಹೆದರುವ ಅವಶ್ಯಕತೆಯಿಲ್ಲ, ನಿರ್ಭೀತಿಯಿಂದ ಇರಬಹುದು ಎಂದು ಧೈರ್ಯ ತುಂಬಿದರು.

ಇದರಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಡಿವೈಎಸ್‌ಪಿ ಧರ್ಮೇಂದ್ರ ಹಾಗೂ ಉಪವಿಭಾಗಾಧಿಕಾರಿ ಶಿವಮೂರ್ತಿ ಇದ್ದರು.

ಬಂಧನದ ಭೀತಿಯಿಂದ ಕಾಡಿನಲ್ಲಿ ಅಡಗಿಕೊಂಡಿದ್ದ ಗ್ರಾಮಸ್ಥರಿಗೆ ಸರಿಯಾದ ಊಟ ಆಹಾರವಿಲ್ಲದೇ ಉಪವಾಸ ಅನುಭವಿಸಿದ್ದರು. ಸರಿಯಾದ ಮೇವು ನೀರು ಸಿಗದೇ ಗ್ರಾಮದಲ್ಲಿ ಎರಡು ಎಮ್ಮೆಗಳು ಸತ್ತಿದ್ದವು. ಇದನ್ನು ಮನಗಂಡ ಜಿಲ್ಲಾಡಳಿತ ಗ್ರಾಮಸ್ಥರ ಮನವೊಲಿಸಿ ಕಾಡಿನಿಂದ ನಾಡಿಗೆ ಅವರನ್ನು ಕರೆತಂದಿದ್ದಾರೆ.