Mysore
36
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಗುಂಡ್ಲುಪೇಟೆ-ಕೇರಳ ಹೆದ್ದಾರಿಯಲ್ಲಿ ಹೆಚ್ಚಿದ ಕಳ್ಳರ ಚೈಚಳಕ: ಅಲರ್ಟ್‌ ಆದ ಪೊಲೀಸರು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು

ಗುಂಡ್ಲುಪೇಟೆ: ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ‌‌ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ಅಲರ್ಟ್ ಆಗಿದ್ದು, ತಪಾಸಣೆ ಬಿಗಿಗೊಳಿಸಿದ್ದಾರೆ.

ಕೇರಳ ಹೆದ್ದಾರಿಯ ಕನ್ನೇಗಾಲ ಟೋಲ್ ಬಳಿ ಗುಂಡ್ಲುಪೇಟೆ ಠಾಣೆ ವತಿಯಿಂದ ಹೆಚ್ಚುವರಿ ಚೆಕ್ ಪೋಸ್ಟ್ ತೆರೆದು ಪೊಲೀಸರನ್ನು ನೇಮಕ ಮಾಡಿ ಗುಂಡ್ಲುಪೇಟೆಗೆ ಆಗಮಿಸುವ ಮತ್ತು ತೆರಳುವ ಪ್ರತಿಯೊಂದು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು ತಪಾಸಣೆ ಮಾಡಲಾಗುತ್ತಿದೆ.

ದರೋಡೆಕೋರರು ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಕೆಲವು ಶ್ರೀಮಂತರರ ಮೇಲು ಕಣ್ಣಿಟ್ಟಿದ್ದು ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುವ ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೇ ಒಂದು ಕಾಲು ಕೆಜಿ ಚಿನ್ನ ಲೂಟಿ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಈಗಾಗಲೇ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ ಪ್ರಕರಣದ ಕಿಂಗ್ ಪಿನ್​ಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

ಮತ್ತೊಂದು ಚಿನ್ನದ ಉದ್ಯಮಿಯ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಕೇರಳದ ಚಿನ್ನದ ಉದ್ಯಮಿಗಳಾದ ಫೈಸಲ್ ಮತ್ತು ಜಮ್ಸಿದ್ ಇಬ್ಬರು ಕೇರಳದಿಂದ ಬಂದು ತಮ್ಮ ಚಿನ್ನವನ್ನು ಮಾರಾಟ ಮಾಡಿ 10 ಲಕ್ಷ ನಗದನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಕೇರಳ ಗಡಿ ಮಧ್ಯೆ ಬರುವ ಕಾಡಿನಲ್ಲಿ ನೆಟ್​ವರ್ಕ್ ಕಂಪ್ಲೀಟ್ ಬಂದ್ ಆಗುತ್ತದೆ. ಯಾವ ಮೊಬೈಲ್​ ಸಿಮ್ ಕೂಡ ವರ್ಕ್ ಆಗಲ್ಲ. ಸಂಪರ್ಕ ಕಡಿತವಾಗುವ ಸ್ಥಳದಲ್ಲಿ ಚಿನ್ನದ ಉದ್ಯಮಿಗಳನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿದ ನಾಲ್ಕೈದು ಜನರ ತಂಡ ಮಾರಕಾಸ್ತ್ರ ತೋರಿಸಿ, ಬೆದರಿಸಿ 10 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದೆ.

ಈ ಪ್ರಕರಣಗಳಿಂದ ಎಚ್ಚೆತ್ತ ಪೊಲೀಸರು ಈಗ ಟೋಲ್ ಗೇಟ್ ಬಳಿ ಮತ್ತೊಂದು ಚೆಕ್​ಪೋಸ್ಟ್ ನಿರ್ಮಾಣ ಮಾಡಿದ್ದು, ಕೇರಳದಿಂದ ಕರ್ನಾಟಕ, ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

Tags:
error: Content is protected !!