ಕೊಳ್ಳೇಗಾಲ: ಅಕ್ರಮವಾಗಿ ಒಣಗಾಂಜಾವನ್ನು ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಜಕ್ಕಳ್ಳಿ ಗ್ರಾಮದ ಜಾನ್ ಬ್ರಿಟೋ (33) ಹಾಗೂ ಅರೇಪಾಳ್ಯ ಗ್ರಾಮದ ವಿನ್ಸೇಟ್(ಚಂಡು) (35) ಬಂಧಿತರು. ಇವರಿಂದ 400 ಗ್ರಾಮ್ ಒಣ ಗಾಂಜಾ ಹಾಗೂ ಸಾಗಾಣಿಕೆ ಬಳಸಿದ್ದ ದ್ವಿಚಕ್ರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ನ್ಯಾಯಾಂಗ ಮುಂದೆ ಹಾಜರು ಪಡಿಸಿದ್ದಾರೆ. ದಾಳಿಯಲ್ಲಿ ಎಎಸ್ಐ ತಖೀವುಲ್ಲಾ, ಹೆಚ್.ಸಿ ರವಿ, ವೆಂಕಟೇಶ್, ಬಿಳಿಗೌಡ, ಕಾನ್ಸಟೇಬಲ್ ವೀರೇಂದ್ರ, ಅನಿಲ್ ಹಾಗೂ ಸಿಬ್ಬಂದಿಗಳು ಇದ್ದರು.





