ಚಾಮರಾಜನಗರ : ಕರ್ನಾಟಕದ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ರಾಜ್ಯದ ಎಲ್ಲಾ ಜಲಪಾತಗಳಿಗೂ ಕೂಡ ಜೀವ ಕಳೆಬಂದಿದೆ. ಅದರಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆ ಕಾವೇರಿ ಹಾಗೂ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿದೆ. ಇದರಿಂದ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೆನಕಲ್ ಫಾಲ್ಸ್ ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕಲ್ಲು ಬಂಡೆಗಳ ಮಧ್ಯ ಹರಿಯುತ್ತಿರುವ ಈ ರಮಣೀಯವಾದ ದೃಶ್ಯವನ್ನು ನೋಡುತ್ತಿದ್ರೆ ನಿಜಕ್ಕೂ ಎರಡು ಕಣ್ಣುಗಳು ಕೂಡ ಸಾಲದು. ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಜಲಪಾತಕ್ಕೆ ಬಂದು ಈ ಮನಮೋಹಕ ದೃಶ್ಯವನ್ನು ನೋಡಿ ತಮ್ಮ ಕ್ಯಾಮಾರದಲ್ಲಿ ದೃಶ್ಯವನ್ನು ಸೆರೆ ಹಿಡಿದುಕೊಳ್ಳುತ್ತಿದ್ದಾರೆ.





