ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸೇತುವೆಯಲ್ಲಿ ಒಂದೇ ಕಡೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಕ್ಕಿಹಾಕಿಕೊಂಡು ಪರದಾಟ ನಡೆಸಿದ ಘಟನೆ ನಡೆದಿದೆ.
ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸೇತುವೆಯಲ್ಲಿ ಮೈಸೂರಿನಿಂದ ಹೋಗುತ್ತಿದ್ದ ಬಸ್ ಹಾಗೂ ಚಾಮರಾಜನಗರದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಕ್ಕಿಹಾಕಿಕೊಂಡು ಮುಂದೆ ಹೋಗಲೂ ಆಗದೇ, ಹಿಂದೆ ಬರಲೂ ಆಗದೇ ಸೇತುವೆಯಲ್ಲೇ ಕೆಲಕಾಲ ಪರದಾಟ ನಡೆಸಿದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಾಲಕರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದು, ಹಿಂದೆ ಇದ್ದ ವಾಹನ ಸವಾರರು ಕೆಲಕಾಲ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೊನೆಗೆ ಸೇತುವೆ ಮೇಲಿಂದ ಬಸ್‌ಗಳು ಒಂದೊಂದಾಗಿ ರಸ್ತೆಗೆ ಬಂದವು. ಆ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.