Mysore
28
clear sky

Social Media

ಗುರುವಾರ, 12 ಮಾರ್ಚ್ 2026
Light
Dark

ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ದೇವಸ್ಥಾನದ ಬಾಗಿಲು ಮುರಿದು ದೇವರನ್ನೇ ಹೊತ್ತೋಯ್ದ ಕಳ್ಳರು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು 

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು, ಜನವಸತಿ ಹೆಚ್ಚಿರುವ ಗ್ರಾಮದ ಮಧ್ಯೆ ಇರುವ ದೇವಸ್ಥಾನದಲ್ಲಿಯೇ ಕಳ್ಳತನ ನಡೆಯುತ್ತಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ದೇವಸ್ಥಾನ ಲೋಕಾರ್ಪಣೆಯಾಗಿತ್ತು. ಸುತ್ತೂರು ಶ್ರೀಗಳಿಂದ ಹಿಡಿದು ಹತ್ತಾರು ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕೂಡ ಸೇರಿದ್ದರು. ಇದಾದ ಎರಡೇ ದಿನಕ್ಕೆ ಗುರುವಾರ ಮುಂಜಾನೆ 2 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಕಳ್ಳತನ ನಡೆದಿದೆ. ದೇವರಿಗೆ ಚಿನ್ನಾಭರಣ ಅಲಂಕಾರ ಮಾಡಿದ್ದರು. ಈ ವೇಳೆ ಈ ಕೃತ್ಯ ನಡೆದಿದೆ.

ದೇವರನ್ನೆ ಹೊತ್ತೋಯ್ದ ಕಳ್ಳರು: ಬರಗಿ ಗ್ರಾಮದ ದೇವಸ್ಥಾನದ ಒಳಗೆ ಪಾರ್ವತಾಂಭೆ ದೇವರ ಬೆಳ್ಳಿ ವಿಗ್ರಹ ಮತ್ತು ಚಿನ್ನದ ತಾಳಿ, ಎರಡು ಕಾಸು, ನಾಲ್ಕು ಗುಂಡು, ಓಲೆ ಜುಮುಕಿ, ತಾಳಿ, ಬೆಳ್ಳಿ ಬಸವ, ಬೆಳ್ಳಿ ಚಂಬು, ಬೆಳ್ಳಿ ಛತ್ರಿ ಸುರಪಾನಿ, ಇರಿಸಲಾಗಿತ್ತು‌ ಕಳ್ಳರು ಬಾಗಿಲ ಬೀಗದ ಚಿಲಕ ಕೂಯ್ದು ದೇವರನ್ನು ಇರಿಸಿದ್ದ ವಿಗ್ರಹನ್ನು ಹೊತ್ತೊಯ್ದಿದ್ದಾರೆ, ಸುಮಾರು 15 ಗ್ರಾಂ ಚಿನ್ನ, 5 ರಿಂದ 6 ಕೆ.ಜಿ ಬೆಳ್ಳಿ ಕಳವು ಮಾಡಿದ್ದಾರೆಂದು ಬರಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮದ ಕಾರ್ಯವಾದ ಎರಡೇ ದಿನಕ್ಕೆ ಕಳ್ಳತನ ನಡೆಸುತ್ತಿರುವ ತಂಡ: ತಾಲ್ಲೂಕಿನ ಬನ್ನೀತಾಳಪುರ ಗ್ರಾಮ ಹಾಗೂ ಭೀಮನಭೀಡು ಗ್ರಾಮದಲ್ಲಿ ಗ್ರಾಮದ ಮಾರಿಹಬ್ಬ ಮತ್ತಿತರ ಕಾರ್ಯಕ್ರಮವಾದ ಎರಡೇ ದಿನಕ್ಕೆ ಐದಾರು ದೇವಸ್ಥಾನದಲ್ಲಿ ಕಳ್ಳತನ ಮಾಡಿರುವ ತಂಡವೇ ಇಲ್ಲಿ ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂಬುದು ಜನರ ಆರೋಪವಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರ ಭೇಟಿ: ಬರಗಿ ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ‌ ನಡೆದಿದ್ದು ಬೆರಳಚ್ಚು ತಜ್ಞರು ಸ್ಯಾಂಪಲ್ ಕಲೆಹಾಕಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೂಡಲೇ ಆರೋಪಿಗಳ ಪತ್ತೆಗೆ ಬಲೆ ಬೀಸಬೇಕಿದೆ.

Tags:
error: Content is protected !!