Mysore
31
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಗುಂಡ್ಲುಪೇಟೆ | ಪಕ್ಕದ ಮನೆಯವರ ಕಿರುಕುಳಕ್ಕೆ ಬೇಸತ್ತ ಯುವತಿ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ!

ಗುಂಡ್ಲುಪೇಟೆ: ಪಕ್ಕದ ಮನೆಯವರ ಕಿರುಕುಳ ತಾಳಲಾರದೆ ಮಾತ್ರೆ ಸೇವಿಸಿ ಯುವತಿ ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ಚನ್ನಮಲ್ಲಿಪುರ ಗ್ರಾಮದಲ್ಲಿ ನಡೆದಿದೆ.

ಕವನ(24) ಸಾವನ್ನಪ್ಪಿದ ಯುವತಿ.

ಘಟನೆ ವಿವರ

ಮೊಬೈಲ್‌ಗೆ ಮೇಸೆಜ್‌ ಬರುತಿತ್ತು. ಈ ಬಗ್ಗೆ ಪಕ್ಕದ ಮನೆಯವರಾದ ವೃಷಬೇಂದ್ರ, ಇವರ ಪತ್ನಿ ಕವಿತಾ, ಮಕ್ಕಳಾದ ಕಾವೇರಿ, ಕೀರ್ತನಾ ಅವರು ಮಾನಸಿಕ ಹಿಂಸೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಯುವತಿ ಬರೆದಿದ್ದಾಳೆ. ಈ ನೋಟ್‌ ಪೊಲೀಸರಿಗೆ ದೊರೆತಿದೆ.

ಮಾನಸಿಕ ಹಿಂಸೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವತಿ ತಮ್ಮ ಅಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಕೂಡಲೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾಳೆ. ತಂದೆ ಕೆಲಸದಿಂದ ವಾಪಸಾಗಿ ಮನೆಗೆ ಹೋಗಿ ನೋಡಲಾಗಿ ಹಾಲ್‌ನಲ್ಲಿ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಆಕೆಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

Tags: