ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಖಾಸಗಿ ಶಾಲೆಯ ಕಾಂಪೌಂಡ್
ಮೇಲೆ ಮರಿಗಳ ಜೊತೆ ಕುಳಿತ ಚಿರತೆ ಕಂಡು ರೈತರು ಹೌಹಾರಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಖಾಸಗಿ ಶಾಲೆಯ ಕಾಂಪೌಂಡ್ ಮೇಲೆ ಇಂದು(ಏಪ್ರಿಲ್.1) ಓರ್ವ ಚಿರತೆಯೊಂದು ತನ್ನ ಮರಿಗಳೊಂದಿಗೆ ಹಾಯಾಗಿ ಕುಳಿತುಕೊಂಂಡಿದೆ. ಈ ದೃಶ್ಯವನ್ನು ಗ್ರಾಮದ ಶಿವಕುಮಾರ್ ಎಂಬುವವರು ಸೆರೆಹಿಡಿದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷತ ಪ್ರದೇಶದ ಬಫರ್ ವಲಯದ ವ್ಯಾಪ್ತಿಯಲ್ಲಿ ಪಡಗೂರು ಗ್ರಾಮ ಬರಲಿದ್ದು, ಚಿರತೆ ಉಪಟಳಕ್ಕೆ ಅರಣ್ಯ ಇಲಾಖೆಯಿಂದ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.