Mysore
24
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಗುಂಡಾಲ್ ಜಲಾಶಯ ಬಳಿ ಹುಲಿ ಸಾವು

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ಕಗ್ಗಲಿಗುಂಡಿ ಪ್ರದೇಶದಲ್ಲಿ (ಗುಂಡಾಲ್ ಜಲಾಶಯ ಬಳಿ) ಶನಿವಾರ ೩ ವರ್ಷದ ಹುಲಿಯೊಂದು ಮೃತಪಟ್ಟಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕಗ್ಗಲಿಗುಂಡಿ ಪ್ರದೇಶದಲ್ಲಿ ಗಸ್ತು ತಿರುಗುವಾಗ ಹುಲಿಯ ಕಳೇಬರ ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆಯ ಪಶು ವೈದ್ಯ ಡಾ.ಮುಜಾಹಿದ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಸುಟ್ಟು ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂರಕ್ಷಿತಾರಣ್ಯದ ನಿರ್ದೇಶಕರಾದ ದೀಪ ಕಂಟ್ರ್ಯಾಕ್ಸ್ ಹುಲಿ ಕಳೇಬರ ದೊರೆತ ಸ್ಥಳದಲ್ಲಿ ಹುಲಿಗಳ ಹೆಚ್ಚು ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಕಾದಾಟದಲ್ಲಿ ಅಶಕ್ತ ಹುಲಿ ಮೃತಪಟ್ಟಿರಬಹುದು.
ಹುಲಿಯನ್ನು ಬೇಟೆಯಾಡಿರುವ ಲಕ್ಷಣಗಳಿಲ್ಲ.

ವಿಷ ಪ್ರಶಾನದಿಂದಲೂ ಸಾವಿಗೀಡಾಗಿಲ್ಲ. ಸ್ಥಳದಲ್ಲೇ ಹುಲಿಯ ಚರ್ಮ, ಉಗುರುಗಳು ಪತ್ತೆಯಾಗಿವೆ. ಹುಲಿಯ ಕಳೇಬರವನ್ನು ಸಂಪೂರ್ಣ ಸ್ಕ್ಯಾನಿಂಗ್ ಮಾಡಿ ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!