ಚಾಮರಾಜನಗರ: ಕಾಡು ರಕ್ಷಕನಿಂದಲೇ ಆನೆ ದಂತ ಸಾಗಾಟ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ನಡೆದಿದೆ.
ಅರಣ್ಯ ವೀಕ್ಷಕರೊಬ್ಬರು ತನ್ನ ಸಂಬಂಧಿಕರೊಂದಿಗೆ ಆನೆ ದಂತ ಸಾಗಿಸುತ್ತಿದ್ದ ವೇಳೆ ಸಂಚಾರಿ ಅರಣ್ಯ ದಳ ಕಾರ್ಯಾಚರಣೆ ನಡೆಸಿದೆ.
ಬೈಕ್‌ನಲ್ಲಿ ಆನೆ ದಂತ ಸಾಗಿಸುತ್ತಿದ್ದ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ವಾಚರ್ ಚಂದ್ರಶೇಖರ್ ಹಾಗೂ ಬಸವರಾಜ್ ಬಂಧನವಾಗಿದೆ. ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ ಪರಾರಿಯಾಗಿದ್ದು, ಈ ಸಂಬಂಧ ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.