ಹನೂರು : ತಾಲೂಕಿನ ಮಂಚಾಪುರ ಗ್ರಾಮದಲ್ಲಿ ಮಗನಿಂದಲೆ ತಂದೆಯ ಹತ್ಯೆಯಾಗಿರುವ ಆರೋಪ ಕೇಳಿ ಬಂದಿದ್ದು, ಅಣ್ಣನ ತಮ್ಮನ ವಿರುದ್ದ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಬುಧವಾರ ಜರುಗಿದೆ.
ತಾಲೂಕಿನ ಮಂಚಾಪುರ ಗ್ರಾಮದ ( 50) ಗೋವಿಂದ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ನಮ್ಮ ಅಪ್ಪ ಗೋವಿಂದ ಅವರು ನನ್ನ ತಮ್ಮ ವಿಶ್ವ ಮತ್ತು ಆತನ ಸ್ನೇಹಿತನಾದ ಶಿವನ ಜೊತೆ ಮನೆಯಲ್ಲಿ ಕುಡಿದ ಮತ್ತಿನಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಮನೆಯ ಹಾಲ್‌ನಲ್ಲಿ ನೇಣು ಹಾಕಿಕೊಂಡಿದ್ದ ನಮ್ಮ ತಂದೆಯ ಅವರನ್ನು ತಮ್ಮನಾದ ವಿಶ್ವನು ನೇಣಿನ ಹಗ್ಗವನ್ನು ಕತ್ತರಿಸಿ ಕೆಳಗಿಳಿಸಿ ಮಂಚದ ಮೇಲೆ ಶವವನ್ನು ಇರಿಸಿಕೊಂಡಿದ್ದ, ಆದರೆ ನನ್ನ ತಂದೆಯ ಸಾವಿನ ಸಂಬಂಧ ನನ್ನ ತಮ್ಮ ವಿಶ್ವ ಮತ್ತು ಆತನ ಸ್ನೇಹಿತನಾದ ಶಿವರವರ ಮೇಲೆ ಅನುಮಾನವಿದೆ ಎಂದು ಹಿರಿಯ ಮಗನು ಪೊಲೀಸರಿಗೆ ದೂರು ನೀಡಿದ್ದಾನೆ.
ರಾಮಾಪುರ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ನೇತ್ರತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶಿಲೀಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.





