ಚಾಮರಾಜನಗರ: ಕಾಡಾನೆಗಳ ದಾಳಿಯಿಂದ ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ನಡೆದಿದೆ.
ಬಂಡೀಪುರ-ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಊಟಿಯಿಂದ ಬರುತ್ತಿದ್ದ ಬೈಕ್ ಸವಾರಿಗೆ ಕಾಡಾನೆಯೊಂದು ಎದುರಾಗಿದ್ದು, ಏಕಾಏಕಿ ಅವನ ಮೇಲೆ ದಾಳಿ ನಡೆಸಲು ಮುಂದಾಗಿತ್ತು.
ಇದರಿಂದ ತೀವ್ರ ಗಾಬರಿಗೊಂದ ಬೈಕ್ ಸವಾರ ಬೈಕನ್ನು ಬಿಟ್ಟು ಕಾಡಿನತ್ತ ಓಡುವಾಗ ಮತ್ತೆ ಕಾಡಾನೆಗಳ ಹಿಂಡಿನೊಳಗೆ ಸಿಲುಕಿದ್ದನು.
ಅದೃಷ್ಟವಶಾತ್ ಕಾಡಾನೆಗಳು ದಾಳಿ ಮಾಡದೇ ಕಾಡಿನೊಳಗೆ ತೆರಳಿದವು. ಈ ಎಲ್ಲಾ ದೃಶ್ಯಗಳನ್ನು ಹಿಂದೆ ಹಿದ್ದ ವಾಹನ ಸವಾರರು ಸೆರೆ ಹಿಡಿದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.