Mysore
27
broken clouds
Light
Dark

ಬಂಡೀಪುರ ಅರಣ್ಯದಲ್ಲಿ ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ !

ಗುಂಡ್ಲಪೇಟೆ : ಅರಣ್ಯದಿಂದ ಬಂದಿದ್ದ ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವಲ್ಲಿ ಅರನ್ಯ ಸಿಬ್ಬಂದಿ ಯಶಸ್ವಿ.

ಬಂಡೀಪುರ ಅರಣ್ಯ ಕಡೆಯಿಂದ ಕಾಡಾನೆ ಒಂದು ಹೊಮ್ಮರಗಳ್ಳಿ ಮಾರ್ಗವಾಗಿ ಮೈಸೂರು ವಲಯದ ಚಿಕ್ಕನಹಳ್ಳಿ ಮೀಸಲು ಅರಣ್ಯಕ್ಕೆ ಬಂದು ಬೀಡು ಬಿಟ್ಟು ರಾತ್ರಿ ವೇಳೆ ರೈತರ ಜಮೀನುಗಳಿಗೆ ಹೋಗಿ ಬೆಳೆ ಹಾನಿ ಮಾಡುತ್ತಿತ್ತು.

ಈ ಕಾಡಾನೆಯನ್ನು ಮರಳಿ ಕಾಡಿಗೆ ಹಿಮ್ಮೆಟ್ಟಿಸುವ ಸಲುವಾಗಿ ದಿನಾಂಕ 16-04-2024 ರಿಂದ 24-04-2024 ರ ವರೆಗೆ ETF LTF ಸಿಬ್ಬಂದಿಗಳ ನೆರವಿನಿಂದ ನಿರಂತರ ಕಾರ್ಯಚರಣೆ ನಡೆಸಿದರೂ ಫಲಪ್ರದವಾಗದ ಕಾರಣ ದಿನಾಂಕ 25-04-2024 ರಂದು ಬಂಡೀಪುರದ ಆನೆ ಶಿಬಿರದಿಂದ ಸಾಕಾನೆ ಜಯಪ್ರಕಾಶ್ ಮತ್ತು ಪಾರ್ಥಸಾರಥಿ ಗಳನ್ನು ಬಳಸಿಕೊಂಡು ದಿನಾಂಕ 26-04-2024 ರ ಬೆಳಗಿನ ಜಾವ ಕಾಡಾನೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲಾಗಿದೆ.

ಲೋಕಸಭಾ ಚುನಾವಣೆ ಇದ್ದುದ್ದರಿಂದ ಮತದಾನ ಪ್ರಕ್ರಿಯೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತ ಕ್ರಮ ವಹಿಸಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಯಿತು, ಚಿಕ್ಕನಹಳ್ಳಿ ಮೀಸಲು ಅರಣ್ಯದ ಸುತ್ತಲಿನ ಗ್ರಾಮಗಳಲ್ಲಿ ಹಾಗೂ ಕಾಡಾನೆ ನಡೆದುಹೋಗುವ ಗ್ರಾಮಗಳಲ್ಲಿ ಜನರು ಹೊರಬರದಂತೆ ಮುಂಚಿತವಾಗಿ ಪ್ರಚಾರಮಾಡಿ ತಿಳಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.

ಅಲ್ಲದೇ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯನ್ನು ಮಧ್ಯ ರಾತ್ರಿ ಬ್ಲಾಕ್ ಮಾಡಿ ಕಾಡಾನೆ ಸುರಕ್ಷಿತವಾಗಿ ರಸ್ತೆ ದಾಟಲು ಅನುವು ಮಾಡಿಕೊಡಲಾಯಿತು.

ಕಾರ್ಯಚರಣೆಗೆ 55 ಜನ ಸಿಬ್ಬಂದಿಗಳು, ಎರಡು ಸಾಕಾನೆಗಳು, 2 ಸಂಖ್ಯೆ ಥರ್ಮಲ್ ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವಿಭಾಗ ರವರ ನೇತೃತ್ವದಲ್ಲಿ ACF ಮೈಸೂರು & ಹೆಚ್.ಡಿ. ಕೋಟೆ, RFO ಮೈಸೂರು & ನಂಜನಗೂಡು ರವರು ಆನೆ ಕಾರ್ಯಪಡೆ ,ಚಿರತೆ ಕಾರ್ಯಪಡೆ, ಮೈಸೂರು, ಸರಗೂರು ಮತ್ತು ನಂಜನಗೂಡು ವಲಯದ ಸಿಬ್ಬಂದಿಗಳ 55 ಜನರ ತಂಡದೊಂದಿಗೆ ಯಶಸ್ವಿ ಕಾರ್ಯಚರಣೆ ನಡೆಸಲಾಯಿತು.