Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಕಳ್ಳಬೇಟೆ ವಿರುದ್ಧ ಬಂಡೀಪುರ ಅರಣ್ಯದಲ್ಲಿ ಕಠಿಣ ಕ್ರಮ

ಗುಂಡ್ಲುಪೇಟೆ: ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ವಿನೂತನ ಪ್ರಯತ್ನ ಮಾಡಿದೆ.

ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ಪತ್ತೆದಾರಿ ಶ್ವಾನ ತರಬೇತಿ ಕೇಂದ್ರ ಆರಂಭ ಮಾಡಲಾಗಿದೆ.

ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಶ್ವಾನ ತರಬೇತಿ ಕೇಂದ್ರವನ್ನು ಆರಂಭಮಾಡಿದ ಕೀರ್ತಿ ಬಂಡೀಪುರಕ್ಕೆ ಸಲ್ಲುತ್ತದೆ.

ಶ್ವಾನದಳ ತರಬೇತಿ ಕೇಂದ್ರವನ್ನು ಮೈಸೂರು ವೃತ್ತದ ಸಿಎಫ್‌ ಡಾ.ಮಾಲತಿ ಪ್ರಿಯಾ ಅವರು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ ಕುಮಾರ್‌, ಬಂಡೀಪುರದ ಸಿಎಫ್‌ಓ ಪ್ರಭಾಕರನ್‌, ಎಸಿಎಫ್‌ ನವೀನ್‌ ಕುಮಾರ್‌, ಆರ್‌ಎಫ್‌ಓ ಮಲ್ಲೇಶ್‌, ಶ್ವಾನದಳ ತರಬೇತಿದಾರ ಅಮೃತ್‌ ಶ್ರೀಧರ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬಂಡೀಪುರ ಅರಣ್ಯ ಇಲಾಖೆ ವತಿಯಿಂದ ಟ್ರ್ಯಾಕರ್‌ ಡಾಗ್‌ ಸ್ಕ್ವಾಡ್‌ ರಚಿಸಲಾಗಿದ್ದು, ಸುಮಾರು 20 ಮಂದಿ ಸಿಬ್ಬಂದಿಗಳನ್ನು ಒಳಗೊಂಡ 12 ಶ್ವಾನಗಳಿಗೆ ತರಬೇತಿ ನಡೆಸಲಾಗುತ್ತಿದೆ.

ಇಲ್ಲಿ ಬೆಲ್ಜಿಯಂ ಮೆಲಿನೋಯಿಸ್‌ ತಳಿಯ ಶ್ವಾನ ಮರಿಗಳಿಗೆ ಸುಮಾರು 10ತಿಂಗಳ ಕಾಲ ನುರಿತ ಸಿಬ್ಬಂದಿ ತರಬೇತಿ ನೀಡಲಿದ್ದಾರೆ. ಈ ಮೂಲಕ ಅಳಿವಿನಂಚಿಲ್ಲಿರುವ ಕಾಡು ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.

ಇನ್ನು ಮುಂದೆ ಕಳ್ಳಬೇಟೆಗಾರರು ಕಾಡು ಪ್ರವೇಶಿಸಲು ಹೆದರಬೇಕಾದ ಪರಿಸ್ಥಿತಿ ಎದುರಾಗಿದ್ದು, ಶ್ವಾನಗಳು ಎಲ್ಲಾ ಕಡೆ ಹದ್ದಿನ ಕಣ್ಣಿಡಲಿವೆ ಎನ್ನಲಾಗಿದೆ.

 

Tags:
error: Content is protected !!