ಹನೂರು: ತಾಲ್ಲೂಕಿನ ದಂಟಳ್ಳಿ ಗ್ರಾಮದ ಕೆರೆಯಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿರುವ ಘಟನೆ ಜರುಗಿದೆ.
ಹನೂರು ತಾಲ್ಲೂಕಿನ ದಂಟಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕೆರೆಯಲ್ಲಿ ಎರಡು ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ನೀರು ಕುಡಿಸಲು ಹೋದಾಗ ಕಂಡುಬಂದಿರುವ ದೃಶ್ಯ ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ
ಕೆರೆಯತ್ತ ತೆರಳಲು ರೈತರು ಹಿಂದೇಟು: ಕೆರೆಯ ದಡದಲ್ಲಿ ಮೊಸಳೆಗಳು ಮಲಗಿರುವುದನ್ನು ಕಂಡಂತಹ ರೈತರು ಮತ್ತು ಗ್ರಾಮಸ್ಥರು ಭಯಬೀತರಾಗಿದ್ದಾರೆ. ಇದರಿಂದಾಗಿ ಅಲ್ಲಿನ ರೈತರು ಗ್ರಾಮಸ್ಥರು ಮೊಸಳೆ ಹಿಡಿಯಲು ಒತ್ತಾಯಿಸಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗ್ರಾಮದ ಕೆರೆಯಲ್ಲಿರುವ ಮೊಸಳೆಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಆಗ್ರಹ ಮಾಡಿದ್ದಾರೆ.
ಈ ನಡುವೆ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯ ನಡುವೆ ಕ್ರೂರ ಪ್ರಾಣಿಗಳಾದ ಹುಲಿ ಚಿರತೆ ಕಾಡು ಹಂದಿಗಳು ಕಾಡಾನೆ ಸರದಿಯ ನಂತರ ಮೊಸಳೆ ಗ್ರಾಮಗಳಲ್ಲಿ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.





